"ಒಮಾನ್ ಕನ್ನಡಿಗರು ಫೇಸ್ ಬುಕ್ ವೇದಿಕೆ"
ಒಮಾನ್ ದೇಶದಲ್ಲಿ ನೆಲೆಸಿರುವ ಸಮಸ್ತ ಕನ್ನಡಿಗರನ್ನು ಎಲ್ಲೆಡೆ ಪ್ರಚಲಿತದಲ್ಲಿರುವ ಫೇಸ್ಬುಕ್ ಸಾಮಾಜಿಕ ತಾಣದಲ್ಲಿ ಒಂದುಗೂಡಿಸುವ ನಿಟ್ಟಿನಲ್ಲಿ ಕೈಗೊಂಡ ಒಂದು ಚಿಕ್ಕ ಪ್ರಯತ್ನ ಈ "ಒಮಾನ್ ಕನ್ನಡಿಗರು". ಈ ಗುಂಪಿನಲ್ಲಿ ೧೩೪ ಜನ ಸದಸ್ಯರಿದ್ದು, ಇನ್ನೂ ಹೆಚ್ಚು ಹೆಚ್ಚು ಜನರು ನಮ್ಮೊಡನೆ ಸೇರಲು ಆಶಿಸುತ್ತೇವೆ. ಗುಂಪಿನ ಸದಸ್ಯರು ಕೇವಲ ಮಸ್ಕತ್ ಗೆ ಮಾತ್ರ ಸೀಮಿತವಾಗಿಲ್ಲದೆ ಸೋಹಾರ್, ಸಲಾಲ ಮತ್ತು ಸುರ್ ಪಟ್ಟಣ ಗಳಿಂದಲು ಬಹು ಜನರಿದ್ದಾರೆ. ತಮ್ಮೊಳಗಿರುವ ಕಲೆಯನ್ನ, ಪ್ರತಿಭೆಯನ್ನ ಬ್ಲಾಗುಗಳು ರೂಪದಲ್ಲಿಳಿಸುತ್ತ ಪ್ರಸಿದ್ಧಿ ಹೊಂದಿರುವ, ಎಲೆಮರೆ ಕಾಯಾಗಿರುವ ಎಲ್ಲಾ ಪ್ರತಿಭಾವಂತರನ್ನ, ಕನ್ನಡಿಗರನ್ನ ಒಂದೇ ವೇದಿಕೆಯಡಿಯಲ್ಲಿ ತಂದು ಪರಸ್ಪರರನ್ನು ಪರಿಚಯಿಸುವ ಉದ್ದೇಶದಿಂದ ಈ ಗುಂಪುನ್ನು ನಿರ್ಮಿಸಲಾಗಿದೆ.
ಗುಂಪಿನ ಉದ್ದೇಶ:
೧. ಒಮಾನಿನ ಯಾವುದೇ ಭಾಗದಲ್ಲಿ ನಡೆಯುವ ಯಾವುದಾದರು ಸಭೆ, ಸಮಾರಂಭಗಳ ಮಾಹಿತಿ ನೀಡಿಕೆ.
೨. ಒಮಾನಿನ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ ಹಂಚಿಕೆ
೩. ಉದ್ಯೋಗ ಅವಕಾಶ ಮಾಹಿತಿ
೪. ಆರೋಗ್ಯ ದ ಕುರಿತು ಮಾಹಿತಿ ಹಂಚಿಕೆ
೫. ಸದಸ್ಯರಲ್ಲಿ ಕಥೆ ಕವನ ಮತ್ತು ಲೇಖನಗಳನ್ನು ಬರೆಯುವ ಆಸಕ್ತಿ ಯಿದ್ದಲ್ಲಿ ನೇರವಾಗಿ ಪ್ರಕಟಪಡಿಸುವ ಅವಕಾಶ.
೬. ಎಲ್ಲೋ ಓದಿದ ಒಳ್ಳೆಯ ಕಥೆ ಕವನ ಮತ್ತು ಹಾಸ್ಯ ಪ್ರಸಂಗ ಗಳನ್ನು ಹಂಚಿಕೊಳ್ಳುವುದು.
೭. ಹೊಸ ರುಚಿ ಅಡುಗೆ ತಯಾರು ಮಾಡುವ ವಿಧಾನ ಮಾಹಿತಿ
೮. ಒಮಾನಿನ ವೀಸಾ ನೀತಿ ನಿಯಮಗಳ ಬದಲಾವಣೆ ಮಾಹಿತಿ
ಹೀಗೆ ಹಲವಾರು ವಿಷಯ ಗಳ ಕುರಿತು ನಾವೆಲ್ಲರು ಮಾಹಿತಿ ವಿನಿಮಯ ಮಾಡಿಕೊಂಡುಈ ವೇದಿಕೆಯನ್ನು ಸದುಪಯೋಗ ಪಡಿಸಿಕೊಳ್ಳೋಣ.ನಿಮ್ಮ ಪರಿಚಿತರನ್ನ ಇಲ್ಲಿ ಸೇರಿಸುವ ಆದಷ್ಟು ಪ್ರಯತ್ನ ನಿಮ್ಮಲ್ಲಿರಲಿ. ಸಮಾನ ಮನಸ್ಕರನ್ನ ಒಂದಾಗಿಸೋಣ. ಎಲ್ಲರೂ ಕೈಜೋಡಿಸಿ ಎಂದು ಕೇಳುತ್ತ.
"ಒಮಾನ್ ಕನ್ನಡಿಗರು" ಫೇಸ್ ಬುಕ್ ವೇದಿಕೆಯ ಪರವಾಗಿ
ರಂಗನಾಥ್.ಪಿ.ಎಸ್
Search us in facebook
as “oman kannadigaru”

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ