ಭಾನುವಾರ, ಡಿಸೆಂಬರ್ 30, 2012

Blood Donation Camp at Muscat



Spandana Muscat, is pleased to announce its maiden Blood Donation Campaign, under the auspices of Department of Blood Services, Ministry of Health.


Date:              Thursday, 10th January 2013

Time:             9 a.m. to 2 p.m.

Place:                        Bldg. No.79, Way No.2116, Al Muzama Street,
Opp. Al Falaj Hotel Tennis Court, Ruwi


Join the Spandana family…Be a Donor… Let’s begin the New Year with a noble gesture

SHARE BLOOD – SHARE LIFE
GIVE  SOMEONE A CHANCE  TO  LIVE
LIGHT UP A LAMP OF LIFE BY DONATING BLOOD

Blood Donation is among the highest service one can render to humanity.  With this thought Spandana Muscat has taken the initiative to start its blood donation drive.

We recognize the importance of blood donation campaigns as it not only assures an adequate supply of blood, but also saves thousands of lives.



All the humanitarians are invited to take part in this camp in large numbers and generously donate blood.  Your contribution to the noble cause will be highly appreciated and regarded with immense gratitude.

For the information of new donors we quote below the useful text derived from the letter from the Department of Blood Services:

"Blood Donation is a simple procedure of 15 to 20 minutes' duration.  Individuals between 18 to 60 years of age, enjoying sound mental and physical health, are fit to donate blood.  All would be donors are requested to have their breakfast/lunch on the day of donation.  Light refreshments will be provided after donation".

As a requirement by the Department of Blood Services, please remember to bring your Donor Card (if you are already a donor in Oman) and the new donors to bring ID/Resident Cards for registration and documentation.

Interested volunteers are requested to kindly register your name by mailing your details (Name, Telephone No. and Resident Card No.) to spandanamuscat@gmail.com

Should you need any further information / assistance, please feel free to contact the undersigned on 92883890 or naikps@hotmail.com

Thanking you in advance for your anticipated kind support.

With kind regards and best wishes for a very Happy, Healthy, Prosperous and a Blissful New Year

Yours sincerely,

Prakash Naik
Convenor – Spandana Muscat


Please Note: 

(i)  All the donors will receive a gift hamper as a goodwill gesture from Spandana
(ii) All the donors will qualify for a raffle draw with a chance to win mobile phones

ಭಾನುವಾರ, ಡಿಸೆಂಬರ್ 16, 2012

ಮಸ್ಕತ್ : ಕೊರತೆಗಳ ನಡುವೆ ರಂಜಿಸಿದ ರಾಜ್ಯೋತ್ಸವ



ಇತ್ತೀಚಿಗೆ ನಡೆದ ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ಅಭಿನಂಧನೆ ಕಾರ್ಯಕ್ರಮದ ನಂತರ ಡಿ.6ರಂದು ಇಂಡಿಯನ್ ಸೋಶಿಯಲ್ ಕ್ಲಬ್ ಮಸ್ಕತ್ ಕರ್ನಾಟಕ ವಿಂಗ್ ವತಿಯಿಂದ ನಡೆಸಲ್ಪಟ್ಟ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ "ಸಿರಿಗನ್ನಡಂ ಗೆಲ್ಗೆ ಎ ಮೆಗಾ ಮ್ಯುಸಿಕಲ್ ಈವೆಂಟ್" ತುಂಬಾ ಸುಂದರವಾಗಿ ಮೂಡಿ ಬಂತು. ಬಹಳ ದಿನಗಳ ನಂತರ ಮಸ್ಕತ್ ನಲ್ಲಿ ನಡೆದ ಕನ್ನಡ ಸಂಗೀತ ಕಾರ್ಯಕ್ರಮ ಜನಪ್ರಿಯ ಸಂಗೀತ ನಿರ್ದೇಶಕ ವಿ.ಮನೋಹರ್, ಖ್ಯಾತ ಗಾಯಕರಾದ ರಮೇಶ್ ಚಂದ್ರ, ಬದ್ರಿ ಪ್ರಸಾದ್, ಸೀಮಾ ರಾಯ್ಕರ್ ಮತ್ತು ವಾದ್ಯಗೋಷ್ಠಿ ಮಸ್ಕತ್ ಕನ್ನಡಿಗರನ್ನು ರಂಜಿಸಿತು. ಸಂಘಟಕರ ಸತತ ಶ್ರಮ ಮತ್ತು ಕಾಳಜಿಯ ಫಲವಾಗಿ ಸಮಸ್ತ ಮಸ್ಕತ್ ಕನ್ನಡಿಗರು ಸಂಗೀತ ರಸದೌತಣ ಸವಿಯಲು ಒಂದು ಉತ್ತಮ ಅವಕಾಶ ದೊರೆತಿತ್ತು. ಕಾರ್ಯಕ್ರಮದ ಮೊದಲಿಗೆ ಶುರು ಮಾಡಿದ, ಜಯ ಭಾರತ ಜನನಿಯ ತನುಜಾತೆ ಹಾಡು ಕನ್ನಡ ಅಭಿಮಾನ ಮತ್ತು ಕನ್ನಡ ಪ್ರೇಮವನ್ನು ಜಾಗೃತಗೊಳಿಸಿದ್ದಂತು ನಿಜ. ಗಾಯಕ ರಮೇಶ್ ಚಂದ್ರ ಹಾಡಿದ ಅನುರಾಗ ಸಂಗಮ ಚಿತ್ರದ ಓ ಮಲ್ಲಿಗೆ, ಮಲಗು ಮಲಗು ಚಾರುಲತೆ, ಜೋಡಿ ಹಕ್ಕಿ ಚಿತ್ರದ ಲಾಲಿ ಸುವ್ವಾಲಿ ಹಾಡು, ಬದ್ರಿ ಪ್ರಸಾದ್ ಹಾಡಿದ ಗಂಧದ ಗುಡಿಯ ನಾವಾಡುವ ನುಡಿಯೆ ಕನ್ನಡ ನುಡಿ, ಸೀಮಾ ರಾಯ್ಕರ್ ಮತ್ತು ಆಕಾಂಕ್ಷ ಬಾದಾಮಿ ಹಾಡಿದ ತೆರೆದಿದೆ ಮನೆ ಓ ಬಾ ಅಥಿತಿ, ಒಂದಾದರೊಂದು ಹಾಡುಗಳು ಗಾಯಕರ ಕಂಠ ದಿಂದ ಹೊರ ಬರುತಿದ್ದರೆ ಜನರನ್ನು ಕುಣಿಯುವಂತೆ ಪ್ರೇರೆಪಿಸುತಿದ್ದವು. ಅದರಲ್ಲೂ ಆಕಾಂಕ್ಷ ಬಾದಾಮಿ ಹಾಡಿದ ನೋಡಯ್ಯ ಕ್ವಾಟೆ ಲಿಂಗವೇ, ಬಾಳಾ ಬಂಗಾರ ನೀನು, ದೂರದಿಂದ ಬಂದಂತ ಸುಂದರಾಗ ಜಾಣ ಹಾಡುಗಳು ಜನರನ್ನು ಕುಪ್ಪಳಿಸುವಂತೆ ಮಾಡಿದವು. ಶಿಳ್ಳೆ ಚಪ್ಪಾಳೆಗಳ ಸದ್ದು ಫಲಜ್ ಹೋಟೆಲ್ ನ ಗ್ರಾಂಡ್ ಹಾಲ್ ನಲ್ಲಿ ಪ್ರತಿಧ್ವನಿಸತೊಡಗಿದ್ದವು. ಇಂತಹ ಸುಂದರ ಕಾರ್ಯಕ್ರಮವನ್ನು ಏರ್ಪಡಿಸಿದ್ದಕ್ಕಾಗಿ ಮಸ್ಕತ್ ಕನ್ನಡಸಂಘವನ್ನು ಹೃದಯ ತುಂಬಿ ಅಭಿನಂಧಿಸಬೇಕು, ಆದರೆ ಸಂಘಟಕರ ಸತತ ಶ್ರಮ ಮತ್ತು ಸಮಯ ಸಾರ್ಥಕವಾಗುವಲ್ಲಿ ಎಡವಟ್ಟಾಯಿತೇನೊ ಎನ್ನುವ ಭಾಸ ಕಾರ್ಯಕ್ರಮದ ಕೊನೆಯವರೆಗೂ ಕಾಡದೆ ಬಿಡಲಿಲ್ಲ. 

ಎಡವಿದ್ದೆಲ್ಲಿ? : ಕನ್ನಡ ಸಂಘದ ಅಧ್ಯಕ್ಷ ಮತ್ತು ಸದಸ್ಯರೆಲ್ಲರೂ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸುವುದರಲ್ಲಿ ಬಹಳ ಅನುಭವಿಗಳು. ಸಾಮಾನ್ಯವಾಗಿ ಕಾರ್ಯಕ್ರಮದ ಶುರುವಿನಲ್ಲಿ ಜ್ಯೋತಿ ಬೇಳಗಿಸಿ ಉದ್ಘಾಟಿಸುವುದು ರೂಡಿ, ನಂತರ ಒಂದು ಭಕ್ತಿ ಗೀತೆ ತದನಂತರ ನಾಡಗೀತೆ. ಇದ್ಯಾವುದು ಇಲ್ಲದೆ ಏಕಾಏಕಿ ಒಂದು ಕಿರು ಭಾಷಣ ಮತ್ತು ಸನ್ಮಾನ ಸಮಾರಂಭ ನಂತರ ಸಂಗೀತ ಕಾರ್ಯಕ್ರಮ ಶುರುವಾಯಿತು. ಒಂದು ಸಮಾರಂಭ ಕಳೆ ಕಟ್ಟಿಕೊಳ್ಳುವುದು ಅದರಲ್ಲಿ ಆಯ್ಕೆ ಮಾಡಿಕೊಂಡ ಕಾರ್ಯಕ್ರಮಗಳಿಂದ. ರಾಜ್ಯೋತ್ಸವದ ಅಂಗವಾಗಿ ಕಾರ್ಯಕ್ರಮವೆಂದರೆ, ದೂರದ ಮರಳುಗಾಡಿನ ಮಸ್ಕತ್ ನಲ್ಲಿ ಕೇವಲ ರಾಜ್ಯೋತ್ಸವ ಆಚರಣೆ ಒಂದು ಆರ್ಕೆಸ್ಟ್ರಾಗೆ ಸೀಮಿತವೇ? ಬೇರೆ ಕಾರ್ಯಕ್ರಮಗಳು ಯಾರಿಗೂ ಹೊಳೆಯಲಿಲ್ಲವೇ? ಕನಿಷ್ಠಪಕ್ಷ ಒಂದು ಉತ್ತಮ ಭಾಷಣ, ಕನ್ನಡಭಿಮಾನ ಮೂಡುವ ಒಂದೆರಡು ಕನ್ನಡನುಡಿ? ಇದ್ಯಾವುದು ಇಲ್ಲದ ಒಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಯಾರಿಗೂ ಮೆಚ್ಚುಗೆಯಾಗತಕ್ಕದ್ದಲ್ಲ. 

ನೀರಸ ನಿರೂಪಣೆ : ಎಂತದೇ ಸಮಾರಂಭಗಳಲ್ಲಿ ಸಭಿಕರನ್ನು ಆಕರ್ಷಿಸುವಂತೆ ಮಾಡುವ ಅವಕಾಶ ವಿರುವುದು ಕಾರ್ಯಕ್ರಮ ನಿರೂಪಣೆ(ಆಂಕರಿಗ್) ಮಾಡುವವರಿಗೆ. ಆದರೆ ಈ ಕಾರ್ಯಕ್ರಮ ವನ್ನು ನಡೆಸಿಕೊಟ್ಟಿದ್ದು ಸಂಗೀತ ನಿರ್ದೇಶಕ ವಿ ಮನೋಹರ್, ಅವರೊಬ್ಬ ಅತ್ಯುತ್ತಮ ಸಂಗೀತ ನಿರ್ದೇಶಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಳ್ಳೊಳ್ಳೆ ಹಾಡುಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟಿದ್ದಾರೆ. ಅವರು ಸಂಯೋಜಿಸಿದ ಹಾಗು ರಚಿಸಿದ ಹಾಡುಗಳು ಇಂದಿಗೂ ಜನರ ಮನಸ್ಸಿನಲ್ಲಿ ಆಚ್ಚಳಿಯದೇ ಉಳಿದಿವೆ. ಆದರೆ ಆಂಕರಿಂಗ್ ಮಾಡುವುದಕ್ಕೆ ಅವರು ಸೂಕ್ತ ಆಯ್ಕೆಯಾಗಿರಲಿಲ್ಲ. ಆಂಕರಿಂಗ್ ಮಾಡುವವರಿಗೆ ಕಂಚಿನ ಕಂಠ, ಬಾಡಿ ಲಾಂಗ್ವೇಜ್, ಸಭಿಕರನ್ನು ಆಕರ್ಷಿಸುವ ಮಾತುಗಾರಿಕೆ ಅತಿ ಮುಖ್ಯ. ಆದರೆ ಸಂಘಟಕರು ಈ ವಿಷಯದಲ್ಲಿ ಎಡವಿದ್ದು ಸ್ಪಷ್ಟವಾಗಿತ್ತು. 

ಬೇಸರ ತಂದ ತಾರತಮ್ಯ : ಸಂಘದ ಸಮಿತಿಯು ಕೆಲವರಿಗೆ ವಿಶೇಷ ಆಮಂತ್ರಣ ನೀಡಿ ಮತ್ತು ಸದಸ್ಯರಿಗೆ ಮಾತ್ರ ಮುಂದಿನ ಆಸನಗಳು ಮೀಸಲಾಗಿಟ್ಟು, ಅವರಿಗೆ ಪ್ರಾಶಸ್ತ್ಯನೀಡಿ ಕುಶಲೋಪರಿಗಳನ್ನು ವಿಚಾರಿಸುತಿದ್ದುದ್ದು ಬಹಳಷ್ಟು ಜನರಿಗೆ ಬೇಸರವನ್ನುಂಟುಮಾಡಿತು. ಹೊಸ ಸದಸ್ಯರಿಗೆ ನೊಂದಣಿ ಮಾಡುವ ವ್ಯವಸ್ಥೆ ಮಾಡದೆ ಇದ್ದದ್ದು, ಇಂತಹ ಕಾರ್ಯಕ್ರಮದಲ್ಲಿ ಹೆಚ್ಚು ಹೆಚ್ಚು ಸದಸ್ಯರನ್ನು ನೊಂದಣಿ ಮಾಡಿಸಿಕೊಳ್ಳಲು ವಿಪುಲ ಅವಕಾಶವಿದ್ದು ಸಂಘದವರು ಅದರ ಕಡೆಗೆ ಗಮನ ವಹಿಸದೇ ಇದ್ದದ್ದು ತುಂಬಾ ಬೇಸರದ ಸಂಗತಿ. 

ಧನ್ಯವಾದಗಳು : ಮಸ್ಕತ್ ಕನ್ನಡಸಂಘದ ಸದಸ್ಯರು, ತಮ್ಮ ದಿನನಿತ್ಯದ ಕಾರ್ಯದೊತ್ತಡ ನಡುವೆಯೂ ಒಂದು ಸುಂದರ ಸಂಗೀತ ಸಂಜೆ ಆಯೋಜಿಸಲು ತಮ್ಮ ಶ್ರಮ ಮತ್ತು ಸಮಯವನ್ನು ವಿನಿಯೋಗಿಸಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತ ಇನ್ನು ಮುಂದೆ ಇದಕ್ಕಿಂತ ಅತ್ಯುತ್ತಮ ಕಾರ್ಯಕ್ರಮ ಚೆನ್ನಾಗಿ ಮೂಡಿಬರಲಿ ಮತ್ತು ಹೆಚ್ಚು ಹೆಚ್ಚು ಮಸ್ಕತ್ ಕನ್ನಡಿಗರನ್ನು ಒಂದು ಸಮಾರಂಭ ಒಂದು ಗೂಡಿಸಿ, ನಾವು ಕನ್ನಡಿಗರು ನಾವೆಲ್ಲ ಒಂದೇ ಎನ್ನುವ ಮಂತ್ರವನ್ನು ಪಠಿಸಬೇಕು ಎಂದು ಅಪೇಕ್ಷಿಸುತ್ತೇವೆ. ಪ್ರತಿಯೊಬ್ಬರು ಇಂತಹ ಹಲವಾರು ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಎಲ್ಲರೂ ಕೈ ಜೋಡಿಸುವಂತಾಗಲಿ

Read more at: 
http://kannada.oneindia.in/nri/article/2012/kannada-rajyotsava-celebrated-in-muscat-070258.html

ಬುಧವಾರ, ಡಿಸೆಂಬರ್ 12, 2012

ಮರಳುಗಾಡಿನಲ್ಲಿ ಮಲೆನಾಡು! ಒಮಾನ್ ದೇಶದ ಸಲಾಲ


ಮಲೆನಾಡು ಎಂದಾಕ್ಷಣ ನಮ್ಮ ಕಣ್ಮುಂದೆ  ಪಶ್ಚಿಮ ಘಟ್ಟ,ಹಲವಾರು ನದಿಗಳು,ನೂರಾರು ಜಲಪಾತ ಗಳು ಸದಾ ಹಸಿರು ತುಂಬಿರುವ ಗಿರಿಶ್ರೇಣಿ ಗಳು,ದಟ್ಟ ಕಾನನ ಗಳು ಸುಳಿಯುತ್ತವೆ. ಆದರೆ ಈ ಹಸಿರಿಗು ಮತ್ತು ಮರಳುಗಾಡಿಗು ಎತ್ತಣಿದೆತ್ತಣ ಸಂಭಂದ? ಓಮನ್ ದೇಶದ ದಕ್ಷಿಣ ಭಾಗದ  ದೋಫರ್ ಎನ್ನುವ ಪ್ರಾಂತ್ಯ ಇಂತಹ ಗಿರಿಶಿಖರಗಳಿಂದ ತುಂಬಿದೆ,ಅಲ್ಲಲ್ಲಿ ಹರಿಯುವ ನದಿಗಳು,ಚಿಕ್ಕ ಚಿಕ್ಕ ಜಲಪಾತಗಳು,ನದಿ ತೊರೆಗಳು ನಮ್ಮ ಮಲೆನಾಡನ್ನು ಜ್ನಾಪಿಸುತ್ತವೆ
http://www.gulfkannadiga.com/news-49597.html
ಸಲಾಲ್ಹ ಎನ್ನುವ ನಗರ ದೋಫರ್ ಪ್ರಾಂತ್ಯದ ರಾಜಧಾನಿ ಹಾಗು ಇದು ಒಮಾನ್ ದೇಶದ ಎರಡನೇ ವಾಣಿಜ್ಯ ನಗರ ಮಸ್ಕತ್ ನಿಂದ 1000 ಕಿಲೋ ಮೀಟರ್ ದೂರದಲ್ಲಿದೆ.ಇಲ್ಲಿ ಕರೀಫ್ ಸೀಸನ್ ಎಂದು ಕರೆಯಲ್ಪಡುವ ಮುಂಗಾರು ಹಬ್ಬ ಬಹು ಜನಪ್ರಿಯ.ಸುತ್ತ ಮುತ್ತಲಿನ ಅರಬ್ ದೇಶಗಳಾದ,ಸೌದಿ ಅರೇಬಿಯ,ಯು‌ಏ‌ಇ,ಕತಾರ್,ಬಹ್ರೇನ್,ಕುವೈತ್ ಮತ್ತಿತರ ಅರಬ್ ದೇಶಗಳ ಪ್ರಜೆಗಳು ಅವರ ದೇಶದಲ್ಲಿರುವ ಬಿಸಿವಾತಾವರಣದಿಂದ ತಪ್ಪಿಸಿಕೊಳ್ಳಲು ಸಲಾಲ್ಹ ದಲ್ಲಿನ ತಂಪಾದ ಹವೆ ಮತ್ತು ವಾತಾವರಣ ವನ್ನು ಸವಿಯಲು ಸಾಮನ್ಯವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಭೇಟಿಯಿಡುತ್ತಾರೆ.
ಸರಕಾರ ಸಹ ಪ್ರವಾಸಿ ಹಬ್ಬ ವನ್ನಾಗಿ ಆಚರಿಸಿ ಪ್ರೋತ್ಸಾಹ ನೀಡುತ್ತದೆ.ಒಮಾನ್ ದೇಶದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ಭಾರತೀಯನಿಗು ಈ ಸ್ಥಳದ ಬಗ್ಗೆ ಅರಿವಿರುತ್ತದೆ ಹಾಗು ಸಾಧ್ಯವಾದವರೆಲ್ಲರು ಭೇಟಿಯಿತ್ತಿರುತ್ತಾರೆ.ಯಾರ ಬಾಯಲ್ಲಿ ಕೇಳಿದರು ಒಮಾನ್ ನಲ್ಲಿ ನೋಡೊದಿಕ್ಕೆ ಏನಿದೆ ಅಂದ್ರೆ ಎಲ್ಲರು ಹೇಳೋದೆ ಸಲಾಲ್ಹ.
ಪ್ರವಾಸಿಗರ ಬೇಸಿಗೆ ರಜೆ ಕಳೆಯಲು ಮತ್ತು ಹಿತಕರವಾದ ಹವಾಮಾನ ಆನಂದಿಸಲು ದೋಫಾರ್ ಗವರ್ನೇಟ್ ಆಫ್ ಸಲಾಲ ಉತ್ಸವ ನಡೆಸಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.  ಇಲಾಖೆಯ ಅಂಕಿ ಅಂಶಗಳ ಪ್ರಕಾರ,ಈ ಬಾರಿ ಒಂದು ದಶಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ.
http://thatskannada.oneindia.in/nri/article/2011/0828-salalah-in-oman-malenadu-of-gulf-aid0038.html
ಉತ್ಸವದ ಅಂಗವಾಗಿ ವಸ್ತುಪ್ರದರ್ಶನ, ಸಾಂಪ್ರದಾಯಿಕ ಹಳ್ಳಿ ಜೀವನ ಹಾಗು ಬುಡಕಟ್ಟು ಜನರ ವೈವಿಧ್ಯತೆಯ ಪ್ರದರ್ಶನ,ರಂಗಪ್ರದರ್ಶನ  ಮತ್ತು ಅನೇಕ ಇತರ ಮನರಂಜನೆ ಚಟುವಟಿಕೆಗಳು ಒಂದು ತಿಂಗಳು ನಡೆದವು.ಸರ್ಕಾರದ ಮತ್ತು ಖಾಸಗಿ ಸಂಘ ಸಂಸ್ಥೆಗಳು ಪ್ರವಾಸಿಗರಿಗಾಗಿ ಉಪಯುಕ್ತ ಮಾಹಿತಿ ಮತ್ತು ಸೇವೆಗಳನ್ನು ನೀಡಿದವು.
ಪ್ರವಾಸೊಧ್ಯಮವನ್ನು ಉತ್ತೇಜಿಸುವ ಸಲುವಾಗಿ ಇಲ್ಲಿನ ಒಮಾನ್ ಏರ್ ಹಾಗು ಮೊದಲನೆ ದರ್ಜೆಯ ಹೋಟೆಲ್ ಗಳಾದ ಕ್ರೌನ್ ಪ್ಲಾಜ,ಹಿಲ್ಟನ್ ಮತ್ತು ಮ್ಯಾರಿಯಟ್ ಗಳು ವಿವಿಧ ರೀತಿಯ ಕೊಡುಗೆ ಗಳನ್ನು ನೀಡಿ ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಹಿಂದೆ ಬೀಳಲಿಲ್ಲ.
ಸುರಕ್ಷತೆ ಮತ್ತು ಪ್ರವಾಸಿಗರಿಗೆ ಭದ್ರತೆ ಖಚಿತಪಡಿಸಲು, ರಾಯಲ್ ಓಮನ್ ಪೊಲೀಸ್ (ROP) ಎಲ್ಲಾ ಸ್ಥಳಗಳಲ್ಲಿ ಉಪಸ್ಥಿತರಿದ್ದರು.ಮಾಮೂಲಿದಿನಗಳಲ್ಲಿ ಕಡಿಮೆ ಯಿದ್ದ ಸಂಚಾರ ಈ ಒಂದು ತಿಂಗಳ ಅವಧಿಯಲ್ಲಿ ಹತ್ತು ಪಟ್ಟು ಹೆಚ್ಚಾಗಿತ್ತು.
ಎಲ್ಲಾ ದಿನ ನಿಯಂತ್ರಣ ಮತ್ತು ಸಂಚಾರ ನಿಯಂತ್ರಿಸಲು RPOಬಹು ಶ್ರಮಿಸಿದರು.ತುರ್ತು ಸಹಾಯ ಮಾಡಲು ಸಿವಿಲ್ ರಕ್ಷಣಾ ಸಿಬ್ಬಂದಿ ಕೂಡ ತುರ್ತು ಸೇವೆಗೆ ಸಿದ್ಧರಾಗಿದ್ದರು
ಮೊಬೈಲ್ ಜಾಲವನ್ನು ಬಲಪಡಿಸಲು Omentalಅತ್ಯಧಿಕ ಗೋಪುರಗಳನ್ನು ನಿರ್ಮಿಸಿತ್ತು. ಬಹುತೇಕ ಇಲ್ಲಿಯ ಎಲ್ಲ ಮಾಧ್ಯಮ ಗಳು ಪ್ರವಾಸೋಧ್ಯಮವನ್ನು ಪ್ರಚಾರ ಮಾಡಲು ಹಿಂದೆ ಬೀಳಲಿಲ್ಲ.
ಸುಲ್ತಾನರ ಮಾಧ್ಯಮ ಉತ್ಸವ ಚಟುವಟಿಕೆಗಳನ್ನು ಪ್ರಚಾರ ಮಾಡ
ಲು ಪ್ರಮುಖ ಪಾತ್ರ ವಹಿಸಿದೆ.ವಿಶೇಷ ಟಿವಿ ಮತ್ತು ರೇಡಿಯೋ ಕಾರ್ಯಕ್ರಮಗಳು ಪ್ರತಿದಿನ ಅರೇಬಿಕ್ ಮತ್ತು ಇಂಗ್ಲೀಷ್ ಪತ್ರಿಕೆಗಳು ’ವರದಿ ಜೊತೆಗೆ ಚಟುವಟಿಕೆಗಳು ಕವರ್ ಮಾಡಲಾಗಿದೆ.
ಟಿವಿ ಕಾರ್ಯಕ್ರಮಗಳು ವೀಕ್ಷಕರನ್ನು ನಿಜವಾದ ಥ್ರಿಲ್ ಮತ್ತು ಮನೋರಂಜನೆಗಾಗಿ Khareet  ಚಟುವಟಿಕೆಗಳು ಮತ್ತು Salalah ಜೊತೆಗಿರುವ ಅನುಭವ ನೀಡುತ್ತದೆ.
ಪ್ರೆಸ್,ಪಬ್ಲಿಕೇಷನ್ ಮತ್ತು ಜಾಹೀರಾತು (OEPPA)ಗೆ ಓಮನ್ ಎಸ್ಟಾಬ್ಲಿಷ್ಮೆಂಟ್,ಅಬ್ಸರ್ವರ್ ಮತ್ತು ಅದರ ಸಹೋದರಿ ಅರೆಬಿಕ್ Dailyಓಮನ್ ನ ಪ್ರಕಾಶಕರು ಘಟನೆಯ ಮಾಧ್ಯಮ ಹೊಣೆಗಾರಿಕೆಯನ್ನು ಹೊತ್ತಿದ್ದರು.

ಮರಳುಗಾಡಿನ ನಾಡಿನಲ್ಲೊಂದು ಜಲಪಾತ ...


(ಒಮಾನ್ ದೇಶದಲ್ಲಿನ ಸಲಾಲ ಪ್ರಾಂತ್ಯ)


ಮರಳುಗಾಡಿನಲ್ಲಿ ಹಸಿರು,ಜಲಪಾತ,ನದಿಗಳು ಹಾಗು ಪ್ರಾಣಿ ಪಕ್ಷಿಗಳನ್ನು ಕಾಣುವುದು ಬಹಳ ಕಡಿಮೆ ಆದರೆ ಒಮಾನ್ ದೇಶದ ಧೋಫಾರ್ ಪ್ರಾಂತ್ಯದಲ್ಲಿನ ಸಲಾಲ ಸುತ್ತಮುತ್ತಲಿನ ಪ್ರದೇಶ ಇದಕ್ಕೆ ತದ್ವಿರುದ್ದ,ಇಲ್ಲೂ ಸಹ ಮಾನವನಿರ್ಮಿತ ಹಾಗು ಪ್ರಕೃತಿ ನಿರ್ಮಿತ ಉದ್ಯಾನವನಗಳಿವೆ, ಜತೆಗೆ ಸಣ್ಣ ಪುಟ್ಟ ಜಲಪಾತಗಳು,ಸರೋವರಗಳು ನಮಗೆ ಕಾಣಸಿಗತ್ತವೆ.
ಅರಬ್ಬಿ ಭಾಷೆಯಲ್ಲಿ ವಾದಿ ಎಂದರೆ ಕಣಿವೆ ಪ್ರದೇಶ ಅಥವ ನದಿ ಪ್ರದೇಶ,  ಹೆಚ್ಚು ಮಳೆ ಬಂದಾಗ ನೀರು ಹರಿಯುವ ಕಣಿವೆ ಪ್ರದೇಶವನ್ನು ವಾದಿ ಎಂದು ಕರೆಯುತ್ತಾರೆ. ಒಮಾನ್ ದೇಶದಲ್ಲಿ ಇಂತಹ ನೂರಾರು ವಾದಿಗಳಿವೆ,ಅತಿ ಹೆಚ್ಚು ಮಳೆ ಬಂದಾಗ ಈ ವಾದಿಗಳಲ್ಲಿ ನೀರು ಹರಿಯುತ್ತದೆ.ಇಂತಹ ಕೆಲ ವಾದಿಗಳು ಕೆಲ ಪ್ರದೇಶಗಳಲ್ಲಿ ಜಲಪಾತಗಳನ್ನು ಸೃಷ್ಟಿ ಮಾಡುತ್ತವೆ. ಅಂತಹ ಪ್ರಕೃತಿ ನಿರ್ಮಿತ ಈ ಜಲಪಾತದ ಹೆಸರು ವಾದಿ ದರ್ಬಾತ್.
ವಾದಿ ದರ್ಬಾತ್ ಒಮಾನ್ ದೇಶದ ಧೋಫಾರ್ ಪ್ರಾಂತ್ಯದಲ್ಲಿರುವ ಪ್ರದೇಶ."ಸಲಾಲ"ದಿಂದ ೫೦ಕಿಮಿ ದೂರದಲ್ಲಿದ್ದು"ತಾಖ"ಪಟ್ಟಣ ದಿಂದ"ಮಿರ್ಬಾತ್" ಪಟ್ಟಣ ಕಡೆ ಹೋಗುವ ರಸ್ತೆ ಯಲ್ಲಿ ಎಡಗಡೆ ವಾದಿ ದರ್ಬಾತ್ ಸಿಗುತ್ತದೆ."ತಾಖ"ಪಟ್ಟಣದಿಂದ ಸುಮಾರು ೭ಕಿ.ಮಿ ದೂರದ ರಸ್ತೆಯಲ್ಲಿ ಕ್ರಮಿಸಿದರೆ ರಸ್ತೆಯ ಎಡಬದಿ ಯಲ್ಲಿ ಈ ಜಲಪಾತ ವನ್ನು ಕಾಣ ಬಹುದು.
ಈ ಜಲಪಾತದಲ್ಲಿ ಯಾವಗಲೂ ನೀರು ಹರಿಯುವುದಿಲ್ಲ,ಆದರೆ ಧೋಫಾರ್ ಬೆಟ್ಟ ಗುಡ್ಡಗಳಲ್ಲಿ ಅತಿ ಹೆಚ್ಚು ಮಳೆಯಾದಾಗ ಇಲ್ಲಿ ನಾವು ನೀರನ್ನು ಕಾಣಬಹುದು.ಸಾಮನ್ಯವಾಗಿ ಮಳೆಗಾಲ ವೆಂದರೆ ಇಲ್ಲಿ ಕರಿಯಲ್ಪಡುವ"ಕರೀಫ್ ಸೀಸನ್" ನಲ್ಲಿ ಮಾತ್ರ ಸ್ವಲ್ಪ ಜಾಸ್ತಿ ಮಳೆಯಾಗುತ್ತದೆ ಆ ಸಮಯದಲ್ಲಿ ಮಾತ್ರ ಕೆಲದಿನಗಳ ಮಟ್ಟಿಗೆ,ಮಳೆ ಬಂದಾಗ ನಾವು ಈ ಜಲಪಾತವನ್ನು ಕಾಣಬಹುದು. ಅಂದಾಜು ನೂರು ಮೀಟರ್ ಉದ್ದ ವಿರುವ ಈ ಜಲಪಾತ ನಾಲ್ಕೈದು ಕವಲಾಗಿ ಒಡೆದು ನೀರು ಕೆಳಗೆ ಬೀಳುತ್ತದೆ.ಕಡಿದಾದ ಬಂಡೆಯನ್ನು ಸುತ್ತುವರಿದಿರುವ ಹಚ್ಚ ಹಸಿರು ಮರಗಿಡಗಳ ನಡುವೆ ಬಾಗಿ ಬಳುಕುತ್ತಾ ಧುಮುಕುವುದನ್ನು ನೋಡುವುದೇ ಒಂದು ರೋಮಾಂಚಕ ಅನುಭವ.ನೀರು ಬಂಡೆಗೆ ತಾಗಿ ಮುತ್ತು ಚೆಲ್ಲಿದಂತೆ ಚದುರಿ ಬೀಳುತ್ತಿರುವ ಸುಂದರ ನೋಟ.ಎಷ್ಟೊಂದು ಜಲಧಾರೆಗಳು ಅದನ್ನು ನೋಡಿಯೇ ಸೌಂದರ್ಯವನ್ನು ಸವಿಯಬೇಕು. ಈ ವಾದಿ ದರ್ಬಾತ್  ಪೂರ್ವಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರ ವನ್ನು ಸೇರುತ್ತದೆ
ಇಡೀ ಒಮಾನ್ ನಲ್ಲಿ ಇತ್ತೀಚೆಗೆ ನವೆಂಬರ್ ಮಾಸದಲ್ಲಿ ೨,೩ಮತ್ತು೪ನೇ ತಾರಿಖು ರಂದು ಅತಿ ಹೆಚ್ಚಿನ ಮಳೆಯಾಯಿತು ಆಗ ಬಹುತೇಕ ಎಲ್ಲ ವಾದಿಗಳು ತುಂಬಿ ಹರಿದು ಜನಸಾಮಾನ್ಯರಿಗೆ ಅತಿ ಹೆಚ್ಚೆನ ನಷ್ಟ ಉಂಟಾಯಿತು.ಆದರೆ ಸಲಾಲ ಸುತ್ತ ಮುತ್ತಲಿನ ಮಳೆಯಾದಾಗ ವಾದಿ ದರ್ಬಾತ್ ಅತಿ ಸುಂದರ ಜಲಪಾತ ಕ್ಕೆ ಸಾಕ್ಷಿಯಾಯಿತು.೨ಮತ್ತು ೩ನೇತಾರಿಖಿನಂದು ನೀರು ಹರಿಯುವುದಕ್ಕೆ ಶುರುವಾದಾಗಿನಿಂದ ಪ್ರತಿಯೊಬ್ಬರು ತಮ್ಮ ತಮ್ಮ ಸ್ನೇಹಿತರಿಗೆ ಕರೆ ಮಾಡಿ ಜಲಪಾತ ನೋಡುವುದಕ್ಕೆ ತಿಳಿಸಿದರು.ರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿಯಾದಾಗಿನಿಂದ ಮಸ್ಕತ್,ಸುರ್,ಸೋಹಾರ್,ನಿಜ್ವ ಮತ್ತು ಬರ್ಕಾ ಮುಂತಾದ ಪ್ರದೇಶಗಳಿಂದ ಜನರು ಸಾಲು ಸಾಲಾಗಿ ಬಂದರು.ಮರಳುಗಾಡಿನ ಬಿಸಿಲಿಗೆ ಬೆಂದು ಹೋಗಿದ್ದ ಜನತೆ ಬದಲಾದ ಹವಮಾನದ ಕಂಪನ್ನು ಸವಿಯಲು ಮಳೆ ಬೀಳುತಿದ್ದರು ಲೆಕ್ಕಿಸದೆ ಈ ಸುಂದರ ದೃಶ್ಯವನ್ನು ನೋಡಿದರು.
ಸುಮಾರು ಅರ್ಧ ಕಿ.ಮಿ.ದೂರದಿಂದ ಕಾಣ ಸಿಗುವ ಜಲಪಾತದ ರಮಣೀಯ ದೃಶ್ಯ, ಮುಖ್ಯರಸ್ತೆಯಿಂದಲೇ ದಾರಿಹೋಕರನ್ನು ಕರೆಯುವ ನಯನ ಮನೋಹರ ದೃಶ್ಯ

 ಜಲಪಾತದ ಎಡಗಡೆಯ ಸುಂದರ ದೃಶ್ಯ



 ಜಲಪಾತದ ಬಲಗಡೆಯ ಸುಂದರ ದೃಶ್ಯ
 ಬಲಗಡೆಯಿಂದ ಧುಮ್ಮಿಕ್ಕಿ ಹರಿಯುವ ದರ್ಬಾತ್ ನದಿಯ ಮೊದಲ ಕವಲು
 ಬಲಗಡೆಯಿಂದ ಧುಮ್ಮಿಕ್ಕಿ ಹರಿಯುವ ದರ್ಬಾತ್ ನದಿಯ ಎರಡನೇ ಕವಲು
 ಮೈದುಂಬಿ ಹರಿಯುತ್ತಿರುವ ದರ್ಬಾತ್ ಜಲಪಾತ,ಸುಂದರ ದೃಶ್ಯವನ್ನು ಸವಿಯಲು ಬೆಟ್ಟದ ಕೆಳಗಡೆ ವಾಹನ ಸಮೇತರಾಗಿ ಕುಳಿತಿರುವ ಜನರು.
 ದರ್ಬಾತ್ ನದಿ ಹರಿಯುತ್ತಿರುವ ಸುಂದರ ದೃಶ್ಯ,ಜಲಪಾತದ ಇಕ್ಕೆಲಗಳಲ್ಲಿ ಜನಸಂದಣಿ. ತಂಪಾದ ಹವೆ ಯನ್ನು ಸವಿಯಲು ನಾಮುಂದು ನೀ ಮುಂದು ಎಂದು ಹರಿದು ಬರುತಿತ್ತು ಜನಸಾಗರ
 ಶಾಂತವಾಗಿ ಹರಿಯುತ್ತಿರುವ ದರ್ಬಾತ್ ನದಿ , ದೃಶ್ಯ-೧
 ಶಾಂತವಾಗಿ ಹರಿಯುತ್ತಿರುವ ದರ್ಬಾತ್ ನದಿ , ದೃಶ್ಯ-೨

 ಕಾರ್ಮುಗಿಲು ನಿಂದ ಆವರಿಸಿರುವ ಹತ್ತಿರದಲ್ಲಿರುವ ಅರಬ್ಬಿ ಸಮುದ್ರ,

 ಸಮುದ್ರ ತೀರದಲ್ಲಿರುವ ಕೊರೆತಕ್ಕೊಳಗಾದ ಬಂಡೆಗಲ್ಲುಗಳು



 ಧರೆಗೆ ಇಣುಕುತ್ತಿರುವ ಸೂರ್ಯ ರಶ್ಮಿ ಯನ್ನು ಬಿಡದೆ ಆಕಾಶವನ್ನು ಆವರಿಸಿದ ಕಾರ್ಮುಗಿಲು.
ಸಮುದ್ರಕ್ಕೆ ಅಭಿಮುಖವಾಗಿರುವ ಬೆಟ್ಟದಸಾಲಿಗೆ ಮೋಡಗಳ ಚುಂಬನ.
 ದರ್ಬಾತ್ ನದಿಯು ಜಲಪಾತ ವಾಗಿ ಧುಮ್ಮಿಕ್ಕುವ ಮುಂಚೆ ಚಿಕ್ಕ ಚಿಕ್ಕ ತೊರೆಗಳಾಗಿ ಹರಿದು, ಕಿರು ಜಲಪಾತವಾಗಿ ಕಾಣುವ ಸುಂದರ ದೃಶ್ಯಾವಳಿ
 ಮೇಲಿನ ದೃಶ್ಯದ ನಂತರ ಮಂದ ಸ್ಮಿತವಾಗಿ ಹರಿಯುತ್ತಿರುವ ದರ್ಬಾತ್ ನದಿ 




 ಪ್ರಶಾಂತವಾಗಿ ಹರಿದು ಪ್ರಪಾತಕ್ಕೆ ಕೆಳಗೆ ಬೀಳುತ್ತಿರುವ ಮುಂಚಿನ ಕಟ್ಟ ಕಡೆಯ ಸ್ಥಳ.
 ಜಲಪಾತ ವನ್ನು ವೀಕ್ಷಿಸಿದ ನಂತರ ಮನೆಗೆ ಹೊರಡುವಾಗ ಸಾಲುಗಟ್ಟಿದ ವಾಹನಗಳು. 





Dayqah Dam


welcome signapproaching the dam

Wadi Ad Dayqah is a tourist attraction, being one of the easy-to-reach wadis, located near Muscat Governorateabout 90 kilometres from Wadi Aday.
To cross this wadi is to explore the Omani mountains and their natural diversity. The wadi is an extension of similar wadis in Ash Sharqiyah Region. About 120 wadis converge into its path, which stretches from Wilayat Dimma Wa Ta’iyeen in Al Sharqiyah North Governorate to its estuary in Wilayat Qurayat, Muscat Governorate. It is one of the year-round flowing wadis.
A dam has been built in this wadi and is considered the biggest in the Sultanate. It consists of two dams: the main one is 75 metres (246 feet) high, and the secondary one is an earthen dam 48.5 metres (149 feet) high. The main dam includes a tower for water drainage. The dam lake is 8 kilometres (5 miles) long, and the dam can hold about 100 million cubic metres (more than 8,000 acre feet) of rain water.
getting close
Wadi Dayqah is the largest dam in Oman.  It was completed on March 26, 2012and has impressed many visitors during the last 8 months.  Due to some creative planning, there are facilities for tourists there that make this a major family picnic area.
nice shot of dam
strong water
colorful water
Courtesy: Andyinoman.


"ಒಮಾನ್ ಕನ್ನಡಿಗರು ಫೇಸ್ ಬುಕ್ ವೇದಿಕೆ"



"ಒಮಾನ್ ಕನ್ನಡಿಗರು ಫೇಸ್ ಬುಕ್ ವೇದಿಕೆ"



ಒಮಾನ್ ದೇಶದಲ್ಲಿ ನೆಲೆಸಿರುವ ಸಮಸ್ತ ಕನ್ನಡಿಗರನ್ನು ಎಲ್ಲೆಡೆ ಪ್ರಚಲಿತದಲ್ಲಿರುವ ಫೇಸ್ಬುಕ್ ಸಾಮಾಜಿಕ ತಾಣದಲ್ಲಿ ಒಂದುಗೂಡಿಸುವ ನಿಟ್ಟಿನಲ್ಲಿ ಕೈಗೊಂಡ ಒಂದು ಚಿಕ್ಕ ಪ್ರಯತ್ನ ಈ "ಒಮಾನ್ ಕನ್ನಡಿಗರು". ಈ ಗುಂಪಿನಲ್ಲಿ ೧೩೪ ಜನ ಸದಸ್ಯರಿದ್ದು, ಇನ್ನೂ ಹೆಚ್ಚು ಹೆಚ್ಚು ಜನರು ನಮ್ಮೊಡನೆ ಸೇರಲು ಆಶಿಸುತ್ತೇವೆ. ಗುಂಪಿನ ಸದಸ್ಯರು ಕೇವಲ ಮಸ್ಕತ್ ಗೆ ಮಾತ್ರ ಸೀಮಿತವಾಗಿಲ್ಲದೆ ಸೋಹಾರ್, ಸಲಾಲ ಮತ್ತು ಸುರ್ ಪಟ್ಟಣ ಗಳಿಂದಲು ಬಹು ಜನರಿದ್ದಾರೆ. ತಮ್ಮೊಳಗಿರುವ ಕಲೆಯನ್ನ, ಪ್ರತಿಭೆಯನ್ನ ಬ್ಲಾಗುಗಳು ರೂಪದಲ್ಲಿಳಿಸುತ್ತ ಪ್ರಸಿದ್ಧಿ ಹೊಂದಿರುವ, ಎಲೆಮರೆ ಕಾಯಾಗಿರುವ ಎಲ್ಲಾ ಪ್ರತಿಭಾವಂತರನ್ನ, ಕನ್ನಡಿಗರನ್ನ ಒಂದೇ ವೇದಿಕೆಯಡಿಯಲ್ಲಿ ತಂದು ಪರಸ್ಪರರನ್ನು ಪರಿಚಯಿಸುವ ಉದ್ದೇಶದಿಂದ ಈ ಗುಂಪುನ್ನು ನಿರ್ಮಿಸಲಾಗಿದೆ.

ಗುಂಪಿನ ಉದ್ದೇಶ:
೧. ಒಮಾನಿನ ಯಾವುದೇ ಭಾಗದಲ್ಲಿ ನಡೆಯುವ ಯಾವುದಾದರು ಸಭೆ, ಸಮಾರಂಭಗಳ ಮಾಹಿತಿ ನೀಡಿಕೆ.
೨. ಒಮಾನಿನ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ ಹಂಚಿಕೆ
೩. ಉದ್ಯೋಗ ಅವಕಾಶ ಮಾಹಿತಿ
೪. ಆರೋಗ್ಯ ದ ಕುರಿತು ಮಾಹಿತಿ ಹಂಚಿಕೆ
೫. ಸದಸ್ಯರಲ್ಲಿ ಕಥೆ ಕವನ ಮತ್ತು ಲೇಖನಗಳನ್ನು ಬರೆಯುವ ಆಸಕ್ತಿ ಯಿದ್ದಲ್ಲಿ ನೇರವಾಗಿ ಪ್ರಕಟಪಡಿಸುವ ಅವಕಾಶ.
೬. ಎಲ್ಲೋ ಓದಿದ ಒಳ್ಳೆಯ ಕಥೆ ಕವನ ಮತ್ತು ಹಾಸ್ಯ ಪ್ರಸಂಗ ಗಳನ್ನು ಹಂಚಿಕೊಳ್ಳುವುದು.
೭. ಹೊಸ ರುಚಿ ಅಡುಗೆ ತಯಾರು ಮಾಡುವ ವಿಧಾನ ಮಾಹಿತಿ
೮. ಒಮಾನಿನ ವೀಸಾ ನೀತಿ ನಿಯಮಗಳ ಬದಲಾವಣೆ ಮಾಹಿತಿ

ಹೀಗೆ ಹಲವಾರು ವಿಷಯ ಗಳ ಕುರಿತು ನಾವೆಲ್ಲರು ಮಾಹಿತಿ ವಿನಿಮಯ ಮಾಡಿಕೊಂಡುಈ ವೇದಿಕೆಯನ್ನು ಸದುಪಯೋಗ ಪಡಿಸಿಕೊಳ್ಳೋಣ.ನಿಮ್ಮ ಪರಿಚಿತರನ್ನ ಇಲ್ಲಿ ಸೇರಿಸುವ ಆದಷ್ಟು ಪ್ರಯತ್ನ ನಿಮ್ಮಲ್ಲಿರಲಿ. ಸಮಾನ ಮನಸ್ಕರನ್ನ ಒಂದಾಗಿಸೋಣ. ಎಲ್ಲರೂ ಕೈಜೋಡಿಸಿ ಎಂದು ಕೇಳುತ್ತ.

"ಒಮಾನ್ ಕನ್ನಡಿಗರು" ಫೇಸ್ ಬುಕ್ ವೇದಿಕೆಯ ಪರವಾಗಿ

ರಂಗನಾಥ್.ಪಿ.ಎಸ್

Search us in facebook as “oman kannadigaru”