ಸೋಮವಾರ, ಮಾರ್ಚ್ 24, 2014

ಮಸ್ಕತ್ ನಲ್ಲಿ ಓಂಕಾರ ಸಮಿತಿಯಿಂದ ವಿಜ್ರಂಭಣೆಯಿಂದ ನಡೆದ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ.

ಓಂಕಾರ ಸಮಿತಿಯು ಮಸ್ಕತ್ ಕನ್ನಡಿಗರ ಮತ್ತು ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ೧೪ ಮಾರ್ಚ್ ೨೦೧೪ (ಫಾಲ್ಗುಣ ಮಾಸಶುಕ್ಲ ಪಕ್ಷತ್ರಯೋದಶಿ ತಿಥಿಆಶ್ಲೇಷ ನಕ್ಷತ್ರಮೀನ ಸಂಕ್ರಮಣ) ಶುಭಘಳಿಗೆಯಂದು ಶ್ರೀ ಕೃಷ್ಣ ಸಭಾಂಗಣದಲ್ಲಿ ಆಯೋಜಿಸಿದ್ದರು.

ಪೂಜೆಯನ್ನು ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ಶ್ರೀಮತಿ ಗಾಯತ್ರಿ ಮತ್ತು ಶ್ರೀ ರಘುರಾಮಚಂದ್ರ ದಂಪತಿಗಳು ವೇದಿಕೆಯ ಮೇಲೆ ಪೂಜಾವಿಧಾನಗಳನ್ನು ನೆರವೇರಿಸಿದರು. ಸಭಾಂಗಣದಲ್ಲಿ ಓಂಕಾರ ಸಮಿತಿಯು ಐವತ್ತಾರು ಪರಿವಾರದವರು ಕುಳಿತು ಶ್ರೀ ಸತ್ಯನಾರಾಯಣ ಪೂಜೆ ಮಾಡುವ ವ್ಯವಸ್ಥೆಯನ್ನು ಮಾಡಿಕೊಟ್ಟಿತ್ತು.

ಬೆಳಿಗ್ಗೆ ೯:0೦ ಘಂಟೆಗೆ ಪೂಜೆಯು ಆರಂಭಗೊಂಡು ಪ್ರಾಥನೆಸಂಕಲ್ಪಅಭಿಷೇಕಸತ್ಯನಾರಾಯಣ ಕಥಾಭಜನೆಮಂಗಳಾರತಿಯೊಂದಿಗೆ ಮಧ್ಯಾಹ್ನ ೧:೦೦ ಘಂಟೆಗೆ ಸಂಪನ್ನಗೊಂಡಿತು. ದೇವಸ್ಥಾನದ ಆವರಣದಲ್ಲಿ ಬಂದತಹ ಎಲ್ಲ ಸದ್ಭಕ್ತರಿಗೂ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಮೊದಲು ಗುರು ಗಣಪತಿ ಪ್ರತಿಷ್ಟಾಪನೆನಂತರ ಶುದ್ದೀಕರಣ ಮಾಡಿನವಗ್ರಹ ದೇವತೆ ಗಳಿಂದ ಹಿಡಿದು ಎಲ್ಲ ದೇವತೆ ಗಳನ್ನು ಕಳಶಕ್ಕೆ ಆವಾಹನೆ ಮಾಡಿದರು,
ಪಂಚಾಮೃತ ಅಭಿಷೇಕ,  ಹಾಲುಮೊಸರು ತುಪ್ಪಬಾಳೆಹಣ್ಣುಜೇನುತುಪ್ಪಸಕ್ಕರೆ ಮತ್ತು ಎಳೆನೀರಿ ನಿಂದ ತಯಾರಿಸಿದ ಪಂಚಾಮೃತ ವನ್ನು  ಅಭಿಶೇಕ ಕ್ಕೆ ಉಪಯೋಗಿಸಲಾಯಿತು.
ಶುದ್ದೋದಕ ಅಭಿಷೇಕ ನಂತರ ಪಂಚ ಕರ್ಫುರಕುಂಕುಮ ಕೇಸರಿಗಂಧನೀರಿನ ಮಿಶ್ರಣದ ಗಂಧೋದಕ ಅಭಿಷೇಕಮಾಡಿದರು.

ವಸ್ತ್ರಅರಿಷಿಣಕುಂಕುಮಗಂಧಹೂ ಗಳಿಂದ ಅಲಂಕಾರ ಮಾಡಿ  ನಂತರ ಸತ್ಯನಾರಾಯಣ ದೇವರನ್ನು ಆವಾಹನೆ ಮಾಡಲಾಯಿತು.ತದನಂತರ ಲಕ್ಷ್ಮಿ ಪೂಜೆ ನೆರವೇರಿತುಸತ್ಯನಾರಾಯಣ ದೇವರ ೧೦೮ ಸ್ತೋತ್ರ ಗಳಿಂದ ಅರ್ಚನೆ ನಡೆಯಿತು.  ತುಳಸಿಮತ್ತು ವಿವಿಧ ಪುಷ್ಪಗಳನ್ನು ಅರ್ಚನೆಗೆ ಉಪಯೋಗಿಸಲಾಯಿತು.

ಸತ್ಯನಾರಾಯಣ ವೃತ ದ ೫ ಕಥೆಗಳನ್ನು ಸವಿಸ್ತಾರವಾಗಿ ಹೇಳಲಾಯಿತುಪ್ರತಿ ಕಥೆ ಯನ್ನು ಹೇಳಿದ ನಂತರ  ದೇವರಿಗೆ ಫಲ ಸಮರ್ಪಣೆ ಮಾಡಿಆರತಿ ಮಾಡಿದರು೫ ನೇ ಅಧ್ಯಾಯ ಮುಗಿದ ನಂತರ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿಆಮೇಲೆ ಭಜನೆ ಕಾರ್ಯಕ್ರಮ ನಡೆಯಿತುತದ ನಂತರ ಎಲ್ಲ ನೈವೇದ್ಯ ಸಮರ್ಪಣೆ ಮಾಡಿ ಮಹಾ ಮಂಗಳಾರತಿ ನೇರವೇರಿಸಿದರು.

ಎಲ್ಲ ಭಕ್ತರಿಂದ ಪ್ರಾರ್ಥನೆಸುಹಾಸಿನಿ ಪೂಜೆಸುಮಂಗಲಿ ಪೂಜೆಬ್ರಾಹ್ಮಣ ಪೂಜೆನಂತರ ಕೊನೆಯಲ್ಲಿ ಪ್ರಾರ್ಥನೆ ಮಾಡಿನಮಸ್ಕಾರ ಮಾಡಿ ಕೃಷ್ಣಾರ್ಪಣೆ ಬಿಟ್ಟು ವಿಸರ್ಜನೆ ನಡೆಯಿತು.
ದೇವಸ್ಥಾನದಲ್ಲಿ  ಅಡಿಗೆ ಭಟ್ಟರಿಂದ ತಯಾರಿಸಿದ ಮಹಾ ಪ್ರಸಾದವನ್ನು ಸುಮಾರು ಒಂದು ಸಾವಿರ ಭಕ್ತಾದಿಗಳಿಗೂ ವಿತರಿಸಲಾಯಿತು.

ಸಾಮಾನ್ಯವಾಗಿ ಸಾಮೂಹಿಕ ಪೂಜೆಯಲ್ಲಿ ಒಂದು ದಂಪತಿ ಯನ್ನು ಕೂರಿಸಿ ಪೂಜಾ ಕೈಂಕರ್ಯವನ್ನು ನೆರವೇರಿಸಿವುದು ಸಾಮಾನ್ಯಆದರೆ ಓಂಕಾರ ಸಮಿತಿಯವರು ಸುಮಾರು ೬೦ ಜನರಿಗಾಗಿ ಪೂಜಾ ಪೀಠ ವನ್ನು ಸಿದ್ಧ ಗೊಳಿಸಿದ್ದರುಪ್ರತಿಯೊಬ್ಬರು ತಮ್ಮ ಕೈಯಿಂದ ಪೂಜೆ ನೆರೆವೇರಿಸಲು ಅನುವಾಗುವಂತೆ ಪೂಜೆಗಾಗಿ ಸತ್ಯನಾರಾಯಣ ಸ್ವಾಮಿ ವಿಗ್ರಹಕಳಶಫೋಟೊಅರ್ಘ್ಯ ಪಾತ್ರೆಪೂಜಾ ಮಣೆ ಇನ್ನು ಹಲವರು ಸಾಮಗ್ರಿಗಳನ್ನು ಪೂಜೆ ಗೆ ಕುಳಿತ ಸುಮಾರು ೫೬ ಪರಿವಾರದವರಿಗೆ ನೀಡಲಾಗಿತ್ತು.

ಸಭಾಂಗಣ ಹೂವಿನ ಅಲಂಕಾರ ಮತ್ತು ಫೋಟೊ ಗಳಿಂದ ಸತ್ಯನಾರಾಯಣ ಸ್ವಾಮಿ ಪೂಜೆ ಗೆ ಕಳೆ ಬಂದಿತ್ತುಸಭಾಂಗಣದ ಮುಕ್ಕಾಲು ಭಾಗ ಜಾಗ ಪೂಜೆಗೆ ಕುಳಿತುಕೊಳ್ಳುವ ದಂಪತಿಗಳಿಗೆ ಮೀಸಲಾಗಿಸಿತ್ತು.


ಓಂಕಾರ ಸಮಿತಿಯ ಶಿಸ್ತು ಬದ್ಧ ಮೇಲ್ವಿಚಾರಣೆ ಪ್ರತಿಯೊಂದು ಕಾರ್ಯದಲ್ಲಿಎದ್ದು ಕಾಣುತಿತ್ತುಎಲ್ಲ ಭಕ್ತಾದಿಗಳು ಓಂಕಾರ ಸಮಿತಿಯವರನ್ನು ಪ್ರಶಂಸುತ್ತಿರುವುದು ಕಂಡು ಬಂತುಮಹಾ ಪ್ರಸಾದಕ್ಕೆ ಬೇಕಾದ ಸಾಮಗ್ರಿಯಿಂದ ಹಿಡಿದುಪೂಜಾ ಸಾಮಗ್ರಿಫಲ ಪುಷ್ಪಸಭಾಂಗಣ ತಯಾರಿಪೂಜಾ ಪೀಠಪೂಜೆ ಗೆ ಬೇಕಾದ ಪ್ರತಿಯೊಂದು ಚಿಕ್ಕ ವಸ್ತು ವಿನಿಂದ ಹಿಡಿದು ಎಲ್ಲವನ್ನು ಹೊಂದಿಸಿಕೊಂಡು ಬಹು ವಿಶಿಷ್ಟ ವಾಗಿ ಸತ್ಯನಾರಾಯಣ ದೇವರ ಪೂಜೆ ಯನ್ನು ನಡೆಸಿಕೊಟ್ಟರು ಜತೆ ಗೆ ಅಚ್ಚುಕಟ್ಟಾದ ಪ್ರಸಾದ ವಿತರಣೆ ಮಾಡಿ ಮಸ್ಕತ್ ಕನ್ನಡಿಗರಲ್ಲದೆಎಲ್ಲ ಆಸ್ಥಿಕರ ಮನಗೆದ್ದಿದ್ದು ವಿಶೇಷವಾಗಿತ್ತು.



































ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ