ಶನಿವಾರ, ನವೆಂಬರ್ 9, 2013
ಸೋಮವಾರ, ಮೇ 20, 2013
ಮಸ್ಕತ್: ಯಶಸ್ವಿಯಾಗಿ ಮೂಡಿಬಂದ ರಾಗ ಅನುರಾಗ ಸಂಗೀತ ಕಾರ್ಯಕ್ರಮ
ಬಹುದಿನಗಳಿಂದ ಎಲ್ಲರು ಕಾಯುತಿದ್ದ ರಾಗ್ ಅನುರಾಗ್ ಸಂಗೀತ ರಸಸಂಜೆ ಕಾರ್ಯಕ್ರಮ ಮೇ ೧೬ ಗುರುವಾರ ಅಲ್ ಫಲಜ್ ಹೋಟೇಲಿನ ದಿ ಗ್ರಾಂಡ್ ಸಭಾಂಗಣದಲ್ಲಿ ತುಂಬಾ ಸುಂದರವಾಗಿ ಮೂಡಿ ಬಂತು.
ನಟ, ಜಾದೂಗಾರ, ಬರಹಗಾರ ಮತ್ತು ನಿರೂಪಕ ಓಂ ಗಣೇಶ್ ರವರ ಅತ್ಯುತ್ತಮ ನಿರೂಪಣೆ, ಪ್ರತಿಭಾನ್ವಿತ ಗಾಯಕ ಗಾಯಕಿ ಯರ ಹಾಡುಗಳು, ನೃತ್ಯ, ಜಾದೂ, ವಾದ್ಯಗೊಷ್ಟಿ ಯವರ ಪ್ರತಿಭಾ ಪ್ರದರ್ಶನ ಹಾಗೂ ಎಲ್ಲೂ ಬೇಸರ ತರಿಸದಂತೆ ಎಲ್ಲ ವಯೋಮಾನದವರಿಗೂ ಇಷ್ಟವಾಗುವಂತೆ ಕಾರ್ಯಕ್ರಮವನ್ನು ರೂಪಿಸಿ ಅದನ್ನು ತುಂಬಾ ಅಧ್ಬುತವಾಗಿ ಪ್ರಸ್ತುತ ಪಡಿಸಿದ್ದು, ಸ್ಪಂದನ ತಂಡದವರ ಅಭಿರುಚಿ ಮತ್ತು ಅನುಭವಕ್ಕೆ ಸಾಕ್ಷಿ ಯಾಯಿತು
ರಾತ್ರಿ ೧೨:೩೦ ರವರೆಗೂ ನಡೆದ ಕಾರ್ಯಕ್ರಮ ಎಲ್ಲರನ್ನು
ರಂಜಿಸುವುದರಲ್ಲಿ ಯಶಸ್ಸು ಕಂಡಿದ್ದು, ಮಸ್ಕತ್ ಕನ್ನಡಿಗರಿಗೆ ಸಂಗೀತ ರಸದೌತಣ ಬಡಿಸಲು ಸ್ಪಂದನ
ತಂಡದವರ ಪಟ್ಟ ಶ್ರಮ ಸಾರ್ಥಕ ವಾಯಿತು
ಪ್ರಾರಂಭಿಕವಾಗಿ ಶ್ರೀಮತಿ ಜಯ ರಮೇಶ್ ಶೆಟ್ಟಿಗಾರ್ ರವರು ಸ್ಪಂದನ ತಂಡ ಮತ್ತು ಅದರ ಕಾರ್ಯಕ್ಷೇತ್ರ, ವ್ಯಾಪ್ತಿ ಕುರಿತು ಪರಿಚಯ ನೀಡಿದರು, ಜತೆಗೆ ೨೦೧೧ ರಲ್ಲಿ ನಡೆದ ಸಂಗೀತ ಲಹರಿ ಮತ್ತು ೨೦೧೨ ರಲ್ಲಿ ನಡೆದ
ಯಾದೋಂಕಿ ಬಾರತ್ ಕಾರ್ಯಕ್ರಮ ಗಳ ನೆನಪುಗಳ ದೃಶ್ಯ ಮಾಲೆ ಸಂಗೀತ ಸಂಜೆಯಲ್ಲಿ ನೆರೆದವರೆಲ್ಲರಿಗೂ
ಮುದನೀಡಿತು.
ಮುಖ್ಯ ಅಥಿತಿ ಯಾಗಿ ಶೇಕ್ ಯೂನಿಸ್ ಸಾಕಿ, ಭಾರತೀಯ ರಾಯಭಾರಿ ಶ್ರೀ ಜೆ.ಎಸ್.ಮುಕುಲ್ ಮತ್ತು ಭಾರತೀಯ ಸಾಮಾಜಿಕ ಘಟಕದ ಅಧ್ಯಕ್ಷರಾದ ಶ್ರೀ
ಸತೀಶ್ ನಂಬಿಯಾರ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಸ್ವಾಗತ ಭಾಷಣ ಮಾಡಿದ ಶ್ರೀ ಪ್ರಕಾಶ್ ಕೋಣಿ ನಾಯಕ್ ರವರು ಮುಕ್ಯ ಅಥಿತಿಗಳನ್ನು ಸನ್ಮಾನಿಸಿ, ನೆನಪಿನ ಕಾಣಿಕೆಯನ್ನು ವಿತರಿಸಿ, ಪ್ರಾಯೋಜಕರಿಗೆ ಅಭಿನಂದನೆ ಸಲ್ಲಿಸಿದರು.

ಪ್ರಖ್ಯಾತ ಕಲಾವಿದ, ಜಾದೂಗಾರ, ಬರಹಗಾರ ಮತ್ತು ಜಗತ್ತಿನ ಹಲವು ದೇಶಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ ಕಾರ್ಯಕ್ರಮ ನಿರೂಪಕ
ರಾದ ಓಂ ಗಣೇಶ್ ರವರನ್ನು ಸ್ಪಂದನ ತಂಡದ ಸದಸ್ಯರಾದ ರಿಯಾಜ್ ಅಹಮದ್ ರವರು ಪರಿಚಯಿಸಿದರು.

ಓಂ ಗಣೇಶ್ ರವರು ಗಾಯಕ ಶ್ರೀನಾಥ್ ಭಾರಧ್ವಾಜ್, ಗಾಯಕಿ ಸುನೀತಾ ಆಚಾರ್ಯ
ಮತ್ತು ವಾದ್ಯ ಗೋಷ್ಟಿ ತಂಡದವರು ಸಾಧನೆಯ ಹಾದಿ, ಬದುಕನ್ನು ಕಟ್ಟಿಕೊಂಡ ರೀತಿ, ಅವರ ಶ್ರಮ ಮತ್ತು ಅವರೆಲ್ಲರ
ಪ್ರತಿಭಾ ಪರಿಚಯ ಮಾಡಿದರು

ಶುಕ್ಲಾಂಬರಧರಂ ಚತುರ್ಭುಜಮ್ ವಿಷ್ಣುಂ ಎಂದು ವಿಘ್ನೇಶ್ವರನ ಪ್ರಾರ್ಥನೆ ಯೊಂದಿಗೆ
ಕಾರ್ಯಕ್ರಮವನ್ನು ಪ್ರಾರಂಬಿಸಿದ ಗಾಯಕಿ ಸುನೀತಾ ಆಚಾರ್ಯ ಮಾಣಿಕ್ಯಾ ಮುಪಲಾಲಂತಿ ಎಂದು ದೇವಿ
ಯನ್ನು ನೆನೆದು, ನಂತರ ಉಪಾಸನೆ ಚಿತ್ರದ ಭಾರತ
ಭೂಶಿರ ಮಂದಿರ ಸುಂದರಿ ಎಂದು ಚಿತ್ರಗೀತೆಯನ್ನು ಹಾಡಿದರು.
ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ರವರು ಬಂದು ಹಾಡುತಿದ್ದಾರೇನೋ ಎನ್ನುವಂತೆ, ಮಾಮರವೆಲ್ಲೋ ಕೋಗಿಲೆ ಎಲ್ಲೋ ಏನೀ ಸ್ನೇಹ ಸಂಬಂಧ ಎಲ್ಲಿಯದೋ ಈ ಅನುಬಂಧ
ಹಾಡನ್ನು ಗಾಯಕ ಶ್ರೀನಾಥ್ ಭಾರಧ್ವಾಜ್ ರವರು ಹಾಡಿದರು., ಜತೆ ಜತೆಗೆ ಇಂಡಿಯಾ ಎಲ್ಲೋ ಮಸ್ಕತ್ ಎಲ್ಲೋ ಏನೀ ಸ್ನೇಹ ಸ್ಪಂದನ
ಎಲ್ಲಿಯದೋ ಈ ಅನುಬಂಧ.... ಕಾರ್ಯಕ್ರಮ ಆಯೋಜನೆಗೆ ತಕ್ಕಂತೆ ಬದಲಾಯಿಸಿ ಮಸ್ಕತ್ ಕನ್ನಡಿಗರು
ಮತ್ತು ಸ್ಪಂದನ ತಂಡದವರಿಗೆ ಕೃತಜ್ನತೆ ಯನ್ನು ಅರ್ಪಿಸಿದರು.
ಪುಟಾಣಿ ಸುಧೀಕ್ಷ ಯಾವ ನಟೀಮಣಿ ಯರಿಗೆ ಕಡಿಮೆ ಇಲ್ಲದಂತೆ ಹಿಂದಿ ಚಿತ್ರಗಳ ಹಾಡುಗಳಿಗೆ ತುಂಬಾ ಸುಂದರವಾಗಿ
ನರ್ತಿಸಿ ತಾನೊಬ್ಬ ಉತ್ತಮ ಕಲಾವಿದೆ ಯಾಗಬಲ್ಲೆ ಎಂದು ತೋರಿಸಿದಳು. ನರ್ತಿಸುವಾಗ ಅವಳು
ಪ್ರದರ್ಶಿಸಿದ ಹಾವಭಾವ ನೆರೆದಿದ್ದ ಸಭಿಕರೆಲ್ಲ ಮೂಕ ಪ್ರೇಕ್ಷಕ ರಾದರು. ಶಿಳ್ಳೆ ಚಪ್ಪಾಳೆಗಳಿಗೆ
ಕಡಿಮೆಯೆ ಇರಲಿಲ್ಲ.
ಭಾರತೀಯ ರಾಯಭಾರಿ ಶ್ರೀ ಜೆ.ಎಸ್.ಮುಕುಲ್ ರವರು ಗಾಯಕಿ ಸುನೀತಾ ಆಚಾರ್ಯರವರಿಗೆ
"ಸಂಗೀತ ವಿಶಾರದೆ" ಬಿರುದನ್ನು ಇತ್ತು ಸನ್ಮಾನಿಸಿ ಹಾಗು ಕರ್ನಾಟಕದಿಂದ ಬಂದಿದ್ದ
ಎಲ್ಲ ಕಲಾವಿದರಿಗೆ ನೆನಪಿನ ಕಾಣಿಕೆಯನ್ನು ವಿತರಿಸಿದರು.
ನಂತರ ಅವರು ಮಾತನಾಡಿ ಸಂಗೀತಕ್ಕೆ ದೇಶ, ಭಾಷೆ, ಹಾಗೂ ಪ್ರಾಂತ್ಯಗಳ ಗಡಿಯಿಲ್ಲ. ಎಲ್ಲರನ್ನು ಸೆಳೆಯುವ ಮಾಂತ್ರಿಕ ಶಕ್ತಿಯಿರುವುದು ಸಂಗೀತ
ಕ್ಕೆ ಮಾತ್ರ ಎಂಬುದಕ್ಕೆ ಇಲ್ಲಿ ನೆರೆದಿರುವ ಸಾಕಷ್ಟು ಜನರೆ ಸಾಕ್ಷಿ. ಕರ್ನಾಟಕದಿಂದ ವಿವಿಧ
ಪ್ರಾಂತ್ಯಗಳಿಂದ ಬಂದಿರುವ ಈ ಎಲ್ಲಾ ಪ್ರತಿಭಾನ್ವಿತ ಕಲಾವಿದರು ಇಂದು ನೆರೆದಿರುವ ಎಲ್ಲರನ್ನು
ರಂಜಿಸಲಿ ಎಂದು ಆಶಿಸುವೆ. ಓಂಗಣೇಶ್ ರವರ ಒಟ್ಟು
ತಂಡಕ್ಕೆ ಮತ್ತು ಸತತ ಮೂರು ವರ್ಷಗಳಿಂದ ಮಸ್ಕತ್ ಕನ್ನಡಿಗರಿಗೆ ಸಂಗೀತ ರಸದೌತಣ ಉಣ
ಬಡಿಸುತ್ತಿರುವ ಸ್ಪಂದನ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.
ನಿರೂಪಕ ಮತ್ತು ಜಾದೂಗಾರ ಓಂಗಣೇಶ್ ರವರು ಶ್ರೀ ಜೆ.ಎಸ್.ಮುಕುಲ್ ರವರ ಕೈಯಲ್ಲಿ ಒಂದು ಜಾದು
ಪ್ರದರ್ಶಿಸಿದರು, ಒಂದು ದೀಪವನ್ನು ಬೆಳಗಿಸಿ
ಅದಕ್ಕೆ ಮುಚ್ಚಳವನ್ನು ಮುಚ್ಚಿ ಮತ್ತೆ ಮುಚ್ಚಳವನ್ನು ತೆರೆದಾದ ಮೇಲೆ ನೂರಾರು ಬಣ್ಣ ಬಣ್ಣದ
ಕಾಗದದ ಪುಷ್ಪಗಳು ಒಂದರ ಮೇಲೋಂದರಂತೆ ಹೊರಬಂದವು. ಜಾದು ನೋಡಿದ ಸಭಿಕರೆಲ್ಲರು ಕರತಾಡನ ಮಾಡಿದರು.
ಶ್ರೀ ಜೆ.ಎಸ್.ಮುಕುಲ್ ರವರು ತಮ್ಮ ಕೈಯಲ್ಲಿ ಒಂದು ಚಿಕ್ಕ ಜಾದು ಮಾಡಿಸಿದ ಓಂ ಗಣೇಶ್ ರವರ
ಕೌಶಲ್ಯಕ್ಕೆ ಬೆರಗಾದರು
ಬಹುಮುಖ ಪ್ರತಿಭೆ ಯ ಗಾಯಕಿ ಸುನೀತಾ ಆಚಾರ್ಯ ತಮ್ಮ ಸುಮಧುರ ಕಂಠ ದಿಂದ ಹಲವಾರು ಕನ್ನಡ
ಮತ್ತು ಹಿಂದಿ ಚಿತ್ರಗೀತೆ ಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು, ಅದರಲ್ಲೂ ಅವರು ಹಾಡಿದ ಕೆ.ಎಸ್ ನರಸಿಂಹ ಸ್ವಾಮಿ ರಚಿಸಿದ ಎಲ್ಲಿ
ಜಾರಿತೋ ಮನವೂ ಹಾಡು ಸುಂದರ ಸಂಗೀತ ಸಂಜೆಗೆ ಕಳಶ ಪ್ರಾಯವಿಟ್ಟಂತಿತ್ತು ಮತ್ತು ಬಿಡುಗಡೆಗೆ
ಸಿದ್ಧವಾಗಿರುವ ತುಳು ಭಾಷೆಯ ನೆರೇನ್ ಚಿತ್ರದ ಹಾಡು ತುಳು ಚಿತ್ರ ರಸಿಕರನ್ನು ರಂಜಿಸಿದರು.
ಹಿಂದಿ ಚಿತ್ರ ಗೀತೆ ಹಮ್ಕೊ ಹಮ್ ಸೆ ಚುರಾಲೋ ಹಾಡು ಗಾನ ಕೋಗಿಲೆ ಲತಾ ಮಂಗೇಶ್ಕರ್ ರವರ ಶೈಲಿ
ಯಲ್ಲಿ ಹಾಡಿ ಸುನೀತಾರವರು ಕನ್ನಡದ ಲತಾ
ಮಂಗೇಶ್ಕರ್ ಎಂಬುದನ್ನು ನಿರೂಪಿಸಿದರು.
ಗಾಯಕ ಶ್ರೀನಾಥ್ ಭಾರಧ್ವಾಜ್ ಮತ್ತು ಗಾಯಕಿ ಸುನೀತಾ ಆಚಾರ್ಯ ರವರು ಜತೆಗೂಡಿ ಹಾಡಿದ ಪಲ್ಲವಿ
ಅನುಪಲ್ಲವಿ ಚಿತ್ರದ ನಗುವ ನಯನ, ನೀನನ್ನ ಗೆಲ್ಲಲಾರೆ ಚಿತ್ರದ ಜೀವ ಹೂವಾಗಿದೆ ಮಧುರವಾಗಿ ಮೂಡಿ ಬಂದವು.
ದಾರಿ ತಪ್ಪಿದ ಮಗ ಚಿತ್ರದ "ಕಣ್ಣಂಚಿನ ಈ ಮಾತಲಿ ಏನೇನು ತುಂಬಿದೆ ಕವಿ ಕಾಣದ ಶೃಂಗಾರದ
ರಸಕಾವ್ಯ ಇಲ್ಲಿದೇ ", ಜಾನಪದ ಗೀತೆ "ಮಾಯದಂತ ಮಳೆ ಬಂತಣ್ಣ" ಹಿಂದಿ ಯ "ಶಾಮ್
ಸುಹಾನಿ" ಮತ್ತು ಕಾರ್ಯಕ್ರಮದ ಕೊನೆಗೆ
ಹಾಡಿದೆ ೪-೫ ಗೀತೆಗಳ ಮಾಲೆ ಹೊಸಬೆಳಕು ಮೂಡುತಿದೆ, ಯಾರೆ ನೀನು ಚೆಲುವೆ ಇನ್ನು ಮುಂತಾದ ಹಾಡುಗಳು ಹಾಡಿದ ಗಾಯಕ ಶ್ರೀನಾಥ್
ಭಾರಧ್ವಾಜ್ ಅವರೊಬ್ಬ ಪ್ರತಿಭಾನ್ವಿತ ಹಾಡುಗಾರ ಎನ್ನುವುದನ್ನು ಸಾಬೀತು ಪಡಿಸಿದವು.
ಸತೀಶ್ ಸಾಲಿಗ್ರಾಮ - ಸ್ಯಾಕ್ಸೋ ಫೋನ್ ವಾದಕರು: ಸತೀಶ್ ಅವರು ನುಡಿಸಿದ ಸ್ಯಾಕ್ಸೋ ಫೋನ್
ಎಲ್ಲರ ಗಮನ ಸೆಳೆಯಿತು.
ಲೋಕೇಶ್ ಮೂಡು ಬಿದರೆ- ಕೊಳಲು ವಾದಕರು: ಉದಯೋನ್ಮುಕ ಕಲಾವಿದ ಲೋಕೆಶ್ ರವರು ನಡೆಸಿಕೊಟ್ಟ
ಫ್ಯೂಶನ್ ಸಂಗೀತ ಎಲ್ಲರ ಮನಸೂರೆಗೊಳಿಸಿತು. ಸುಮಾರು ೧೫ ನಿಮಿಷಗ ಕಾಲ ಕೊಳಲು ವಾದನ ನಡೆಸಿ
ಲೋಕೇಶ್ ಅವರು ಜನರನ್ನು ಮಂತ್ರಮುಗ್ಧರನ್ನಾಗಿಸಿದರು. ತಾವೊಬ್ಬ ಪ್ರತಿಭಾನ್ವಿತರು ಎನ್ನುವುದನ್ನು
ಫ್ಯೂಶನ್ ಸಂಗೀತ ದ ಮೂಲಕ ತೋರ್ಪಡಿಸಿದರು, ಜತೆಗೆ ರಾಗ ರಂಗ್ ಮತ್ತು ಮಿಕ್ಕೆಲ್ಲ ಚಿತ್ರ ಗೀತೆಗಳಿಗೆ ಕೊಳಲು ನುಡಿಸಿ ಕಾರ್ಯಕ್ರಮದ
ಅಂದವನ್ನು ಹೆಚ್ಚಿಸಿದರು
ರಾಗ್ ರಂಗ್: ವಾದ್ಯ ಗೋಷ್ಟಿ ಯವರ ಕೈಚಳಕ ಅವರ ಚಾಕ ಚಕ್ಯತೆ, ವಾದ್ಯಗಳ ಮೇಲಿನ ಹಿಡಿತ, ವಾದ್ಯಗಳ ಮುಕಾಂತರ ಚರ್ಚೆ, ಜಿದ್ದಾಜಿದ್ದು ಅಬ್ಬಬ್ಬಾ ವಾದ್ಯಗಳ ಮೂಲಕ ಸಂಗೀತ ಹೊರ
ಹೊಮ್ಮುತಿದ್ದರೆ ವಾದ್ಯಗಾರರು ಪ್ರೇಕ್ಷಕರನ್ನು ಭಾವಪರವಶಗೊಳಿಸಿ, ರಿದ ಸಾವಿರಾರು ಜನರಲ್ಲಿ ಹರ್ಷೋದ್ಗಾರ ಮೂಡುವಂತೆ ಮಾಡಿದರು. ಲೋಕೇಶ್
ಮೂಡು ಬಿದರೆ ರವರ ಕೊಳಲು,
ರಾಜೇಶ್ ಭಾಗವತ್ ರವರ ತಬಲ, ಪ್ರಕಾಶ್ ಆಂಟನಿ ಯವರ ಡ್ರಂ ಮತ್ತು ರಿದಂಪ್ಯಾಡ್, ಸತೀಶ್ ಸಾಲಿಗ್ರಾಮ ರವರ ಸ್ಯಾಕ್ಸೋ ಫೋನ್, ಶರತ್ ರವರ ಗಿಟಾರ್, ದೀಪಕ್ ಜಯಶೀಲ ರವರ ಕೀಬೋರ್ಡ್,
ಒಬ್ಬರಿಗೊಬ್ಬರು ಪೈಪೋಟಿಗೆ ಬಿದ್ದವರಂತೆ ನುಡಿಸುತಿದ್ದರೆ ಭೇಷ್ ಅನ್ನದೆ ಇರುವ ಸಂಗೀತ
ಪ್ರೇಮಿ ಸಭಾಂಗಣದಲ್ಲಿ ಇರಲೇ ಇಲ್ಲವೇನು ಎಂಬಂತೆ ಪ್ರತಿಯೊಂದು ವಾದ್ಯಗಾರರ ರಾಗ ಕ್ಕೆ ಚಪ್ಪಾಳೆ
ತಟ್ಟಿ ಪ್ರೋತ್ಸಾಹಿಸಿದರು. ಒಟ್ಟಿನಲ್ಲಿ ಎಲ್ಲರ ಸಮ್ಮಿಳನದ ರಾಗರಂಗ್ ಕಾರ್ಯಕ್ರಮ ತುಂಬಾ ಸುಂದರ
ವಾಗಿ ಮೂಡಿ ಬಂತು.
ಮಸ್ಕತ್ತಿನ ರದೈ ರೂಪೇನ್ ರವರು ಸಂಯೋಜಿಸಿದ ಹಿಂದಿಯ "ದಮ್ಮರೆ ದಮ್" ಚಿತ್ರ
ಗೀತೆಗೆ ಸಿಮ್ರನ್ ಮತ್ತು ದೃತಿ ನರ್ತಿಸಿ ಪ್ರೇಕ್ಷಕರ ಮನಸೂರೆಗೊಳಿಸಿದರು.
ಮಜಾನ್ ಈವೆಂಟ್ಸ್ ನ ಶೇಕ್ ಕಲೀಮ್ ಮೊಹಮ್ಮದ್ ರವರು ಖ್ಯಾತ ಜಾದೂಗಾರ ಚಿತ್ರನಟ ಓಂಗಣೇಶ್ ಅವರ 'ಜಾದೂಗಾರನ ಜರ್ನಿ" ಕೃತಿಯನ್ನು ಬಿಡುಗಡೆ ಗೊಳಿಸಿದರು. ೪೦
ರಾಷ್ಟ್ರಗಳನ್ನು ಸುತ್ತಿ ಅವರಿಗಾದ ಅನುಭವ ಕುರಿತು ಬರೆದಿರುವ ಓಂ ಗಣೇಶ್ ರವರು ತಾವೊಬ್ಬ ಉತ್ತಮ
ನಿರೂಪಕ, ಜಾದೂಗಾರ, ನಟ ಮಾತ್ರವಲ್ಲದೆ ಉತ್ತಮ ಬರಹಗಾರ ಎಂದು ಈ ಕಾರ್ಯಕ್ರಮದ ಮೂಲಕ
ಸಭಿಕರೆಲ್ಲರಿಗೂ ಪರಿಚಯವಾಯಿತು.
ನಿರೂಪಕ ಓಂಗಣೇಶ್ ರವರ ಬಗ್ಗೆ ಎಷ್ಟು ಹೇಳಿದರೂ ಸಾಲದು, ಅವರ ಕಾರ್ಯಕ್ರಮ ನಿರೂಪಣೆಯ ದಾಟಿ ತುಂಬಾ ಸೊಗಸಾಗಿತ್ತು. ಅವರು ಹೇಳಿದ ಕೆಲ ಅನುಭವಗಳು, ಸಣ್ಣ ಕಥೆಗಳು, ನಿರೂಪಣೆ ಹಾಗೂ ಮಧ್ಯೆ ಮಧ್ಯೆ ಮಾತನಾಡುತ್ತ ಅವರು ತೋರಿದ ಜಾದೂ ವಿದ್ಯೆ, ಅದೆಲ್ಲದರ ಕುರಿತು ಒಂದೆರಡು ಲೇಖನ ಬರೆದರೂ ಮುಗಿಯದು ಅನ್ನಿಸುತ್ತೆ.
ಕಾರ್ಯಕ್ರಮವು ಲತಾ ಮಂಗೇಶ್ಕರ್ ಹಾಡಿರುವ ದೇಶ ಭಕ್ತಿ ಗೀತೆ "ಆಯೆ ಮೇರೆ ವತನ್ ಕೆ
ಲೋಗೋ" ಹಾಡನ್ನು ಗಾಯಕಿ ಸುನೀತಾ ಆಚಾರ್ಯ ಹಾಡುವುದರೊಂದಿಗೆ ಮುಕ್ತಾಯವಾಯಿತು. ಮಸ್ಕತ್
ಕನ್ನಡಿಗರನ್ನು ಮನರಂಜಿಸಲು ಕಳೆದ ೨ ತಿಂಗಳಿನಿಂದ ಕಾರ್ಯಕ್ರಮದ ರೂಪು ರೇಶೆ ಗಳನ್ನು
ರೂಪಿಸಿಕೊಂಡಿದ್ದ ಸ್ಪಂದನ ತಂಡ ಕರ್ನಾಟಕದ ವಿವಿಧ ಭಾಗಗಳಿಂದ ಒಂದು ವೇದಿಕೆ ಯಲ್ಲಿ ಕರೆದು
ತಂದಿದ್ದ ಕಾರ್ಯಕ್ರಮದ ಆಯೋಜಕರಾದ ಶ್ರೀ ಬಸ್ರೂರು ರವರು ಮತ್ತು ಸ್ಪಂದನ ತಂಡದವರು ಎಲ್ಲರ
ಮೆಚ್ಚುಗೆಗೆ ಪಾತ್ರ ರಾದರು.
ನಾಡಿನಲ್ಲಿರುವ ಉದಯೋನ್ಮುಕ ಮತ್ತು ಹಿರಿಯ ಪ್ರತಿಭಾನ್ವಿತ ಕಲಾವಿದರನ್ನು ಗುರುತಿಸಿ ಮಸ್ಕತ್
ನ ವೇದಿಕೆಗೆ ಕರೆ ತಂದು ಮತ್ತು ಪ್ರೇಕ್ಷಕರ ನಾಡಿಮಿಡಿತ ವನ್ನು ಅರಿತು ಅದಕ್ಕೆ ತಕ್ಕಂತೆ ಎಲ್ಲೂ ಬೋರು ಹೊಡೆಸದಂತೆ
ಕಾರ್ಯಕ್ರಮಗಳ ಸರಮಾಲೆಯನ್ನು ರೂಪಿಸಿ ಒಂದು ಅಭೂತ ಪೂರ್ವ ವಾದ ಕಾರ್ಯಕ್ರಮಕ್ಕೆ ಕಾರಣೀ ಭೂತರಾದ
ಸ್ಪಂದನ ತಂಡದ ಹಿರಿಯರ ಅನುಭವಕ್ಕೆ ಹಿಡಿದ ಕೈಗನ್ನಡಿಯಾಗಿತ್ತು ರಾಗ್ ಅನುರಾಗ್ ಕಾರ್ಯಕ್ರಮ.
ನಮ್ಮೆಲ್ಲರ ಮನರಂಜಿಸಲು ಕಾರಣೀ ಭೂತರಾದ ಸ್ಪಂದನ ತಂಡಕ್ಕೆ ನಮ್ಮ ಹೃದಯಪೂರ್ವಕ ವಂದನೆಗಳು.
ಶುಕ್ರವಾರ, ಏಪ್ರಿಲ್ 5, 2013
"ಮಸ್ಕತ್ ನಲ್ಲಿ ಮತ್ತೊಂದು ಸಂಗೀತ ರಸಸಂಜೆ - ಮೇ:೧೬"
ಸ್ಪಂದನ ತಂಡದವರು ಮಸ್ಕತ್ ಕನ್ನಡಿಗರಿಗಾಗಿ ಮತ್ತೊಂದು ಸಂಗೀತ ರಸದೌತಣ ಉಣಬಡಿಸಲು ವೇದಿಕೆ ಸಿದ್ದಪಡಿಸತೊಡಗಿದ್ದಾರೆ. ಸಂಘಟಕರ ತಯಾರಿ ನೊಡಿದರೆ
ಇದೊಂದು ಕಾರ್ಯಕ್ರಮ ಅದ್ಬುತ ವಾಗಿ ರೂಪಿತಗೊಳ್ಳು ವಂತೆ ಕಾಣುತ್ತಿದೆ. ಕಳೆದ
ವರ್ಷ ನಡೆದ "ನೆನಪಿನಂಗಳ" (ಯಾದೋಂಕಿ
ಬಾರಾತ್) ಸಂಗೀತ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬಂದಿತ್ತು.
ಆ ನೆನಪುಗಳು ಇಂದಿಗೂ ಸಹ ಕಾಡುತ್ತಿವೆ. ಈಗ ಮತ್ತೊಂದು
ಸಂಭ್ರಮಕ್ಕಾಗಿ ಮಸ್ಕತ್ ಕನ್ನಡಿಗರು ಕಾಯುವಂತೆ ಮಾಡಲು ಮುಂದಾಗಿರುವ ಸ್ಪಂದನ ಸಂಘಟಕರಿಗೆ ನಮ್ಮದೊಂದು
ಸಲಾಮ್.
ಇಲ್ಲಿ ಮುಖ್ಯವಾಗಿ ನಾನು ಹೇಳಬೇಕೆಂದಿರುವುದು, ಸಂಘಟಕರ ಬದ್ದತೆ,
ಇಚ್ಚಾಶಕ್ತಿ ಮತ್ತು ಸ್ಪಂದನ ಸದಸ್ಯ ರ ಸಂಪೂರ್ಣ ತೊಡಗಿಕೊಳ್ಳುವಿಕೆ ಕುರಿತು.
೨೦೧೩ ಹೊಸವರ್ಷದ ಉಡುಗೊರೆಗಾಗಿ ಮಾನವೀಯ ಮೌಲ್ಯಗಳನ್ನು ಒಳಗೊಂಡ ರಕ್ತದಾನ ಶಿಬಿರ
ಏರ್ಪಡಿಸಿ ಸುಮಾರು ೧೫೦ ಜನರಿಂದ ರಕ್ತದಾನ ಮಾಡಿಸಿದ್ದು, ಜಾತಿ ಮತ ಧರ್ಮ
ಬೇಧವಿಲ್ಲದೆ ಅತಿ ಹೆಚ್ಚು ಜನರು ಭಾಗವಹಿಸಿದ್ದು ವಿಶೇಷ ವಾಗಿತ್ತು ಅದರಲ್ಲೂ ಅತಿಹೆಚ್ಚು ಕರ್ನಾಟಕದವರೆ
ತೊಡಗಿಸಿಕೊಂಡಿದ್ದು ವಿಶೇಷ ವೆನಿಸಿತ್ತು. ಯಾವುದೇ ಅಪೇಕ್ಷೆ ಮತ್ತು ನಿರೀಕ್ಷೆ
ಯಿಲ್ಲದೆ ಸ್ಪಂದನ ಸದಸ್ಯರ ಎಲ್ಲ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದು, ಇದಲ್ಲದೆ ಹಲವಾರು ಸಮಾಜ ಸೇವಾ ಕಾರ್ಯಕ್ರಮಗಳನ್ನು ನೆರವೇರಿಸುವ ಮೂಲಕ ಅವರ ಸಾಮಾಜಿಕ ಬದ್ಧತೆ
ಎತ್ತಿ ತೋರಿಸುತ್ತೆ. ಯಾವುದೇ ಒಂದು ಕೆಲಸದಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ
ತೊಡಗಿಸಿಕೊಂಡಾಗ ಮಾತ್ರ ಅದರಲ್ಲಿ ಯಶಸ್ವಿಯಾಗೋದು ಖಂಡಿತ, ಹಾಗೆಯೆ ಇಚ್ಚಾಶಕ್ತಿ
ಸಹ ಬಹುಮುಖ್ಯ. ಸ್ಪಂದನ ತಂಡದವರಲ್ಲಿ ಪ್ರಮುಖರಾದ ಶ್ರೀಯುತ ಪ್ರಕಾಶ್ ಕೋಣಿ
ನಾಯಕ್, ಕರುಣಾಕರ್ ರಾವ್ ಮತ್ತು ಇನ್ನೂ ಹಲವರ ಪಾತ್ರ ಬಹು ದೊಡ್ಡದು.
ಯಾವುದೇ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಸೇವೆ ಮಾಡುವ ಸಂಘದ ಸದಸ್ಯರ ಗುಣ ಮೆಚ್ಚುವಂತಹದ್ದು.
ಕಳೆದ ಬಾರಿ ಯಾದೋಂಕಿ ಬರಾತ್ ಕಾರ್ಯಕ್ರಮದಲ್ಲಿ ಸಂಗೀತ ಕಾರ್ಯಕ್ರಮ ಹೊರತುಪಡಿಸಿ ಮಿಕ್ಕೆಲ್ಲ
ಕಾರ್ಯಕ್ರಮಗಳಿಗೆ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದ್ದರು. ಇದರಿಂದ ಮಸ್ಕತ್ ನಲ್ಲಿ ಎಲೆ ಮರೆ ಕಾಯಿಯಂತಿದ್ದ ಬಹುತೇಕ ಪ್ರತಿಭೆಗಳ ಪ್ರೇಕ್ಷಕರಿಗೆ
ಪರಿಚಯವಾಯಿತು. "ನೆನಪಿನಂಗಳ" (ಯಾದೋಂಕಿ ಬರಾತ್) ರಸಸಂಜೆಯ
ಯಶಸ್ಸಿನ ಗುಟ್ಟು ಏನೆಂದರೆ, ಅದೊಂದು ಕೇವಲ ಸಂಗೀತ ಕಾರ್ಯಕ್ರಮ ವಾಗಿರಲಿಲ್ಲ,
ಎಲ್ಲ ವಯೋಮಾನದವರು ಇಷ್ಟಪಡುವಂತಹ ಕಾರ್ಯಕ್ರಮ ಗಳನ್ನು ರೂಪಿಸಿದ್ದು. ಬಹುಮುಖ್ಯವಾಗಿ ಹಾಡುಗಳ ಆಯ್ಕೆ ತುಂಬಾ ಮಹತ್ವದ್ದು., ಜತೆಗೆ ಹಲವಾರು
ನೃತ್ಯ ಪ್ರದರ್ಶನ, ಯಕ್ಷಗಾನ ಮತ್ತು ಜೋಕ್ ಗಳು. ಒಂದು ಟಿವಿ ಶೋ ನಂತೆ ಒಂದರ ನಂತರ ಕಾರ್ಯಕ್ರಮಗಳು ನಡೆದಿದ್ದು, ರಾತ್ರಿ ೧೧ ಗಂಟೆಯವರೆಗೂ ಅಲ್ ಫಲಜ್ ಹೋಟೆಲ ನ ಗ್ರಾಂಡ ಸಭಾಂಗಣ ಜನ ಶಿಳ್ಳೆ ಚಪ್ಪಾಳೆಗಳೊಂಡಿಗೆ
ಜನ ಕುಪ್ಪಳಿಸಿ ಕುಣಿದಿದ್ದು "ನೆನಪಿನಂಗಳ" ಕಾರ್ಯಕ್ರಮದ ಯಶಸ್ಸಿನ ಗುಟ್ಟು ಎಂದು ಹೇಳಲಡ್ಡಿಯಿಲ್ಲ.
ಕಳೆದ ಎರಡುವರೆ ದಶಕಗಳಿಂದ ಮಸ್ಕತ್ ನಲ್ಲಿ ನೆಲೆಸಿರುವ ಶ್ರೀಯುತ ಪ್ರಕಾಶ್ ಕೋಣಿ ನಾಯಕ್ ರವರಿಗೆ
ಕನ್ನಡಿಗರ ನಾಡಿಮಿಡಿತ ಚೆನ್ನಾಗಿ ಬಲ್ಲರು, ಅದರ ತಕ್ಕಂತೆ ಸುಂದರ ಕಾರ್ಯಕ್ರಮಗಳನ್ನು
ನಡೆಸಿಕೊಡುವುದರಲ್ಲಿ ಅವರ ಪರಿಶ್ರಮ ಅಪಾರ. ಅದೂ ಅಲ್ಲದೆ ಅವರಿಗಿರುವ ಸಂಘಟನಾ
ಶಕ್ತಿ ಬಹು ದೊಡ್ಡದು, ಮಸ್ಕತ್ ನಲ್ಲಿ ಒಂದು ಕಾರ್ಯಕ್ರಮ ನಡೆಸುವುದು ಬಹು
ದೊಡ್ಡ ಸಂಗತಿ, ಸೂಕ್ತ ಪ್ರಾಯೋಜಕರ ಹುಡುಕಾಟ ಮತ್ತು ಸಭಾಂಗಣದಲ್ಲಿ ಸಾವಿರಾರು
ಪ್ರೇಕ್ಷಕರನ್ನು ಒಂದು ಕಡೆ ಕಲೆಹಾಕುವುದು ಸಾಮಾನ್ಯ ಮಾತಲ್ಲ. ಈ ಬಗ್ಗೆ
ಅವರನ್ನು ಪ್ರಶ್ನಿಸಿದಾಗ ಅವರು ಹೇಳಿದ್ದು ಇಷ್ಟು "ಒಂದು ಒಳ್ಳೆ ಕೆಲಸ
ಮಾಡುವುದಕ್ಕೆ ಒಂದು ಒಳ್ಳೆ ಮನಸ್ಸು ಮತ್ತು ಇಚ್ಚಾಶಕ್ತಿ ಇದ್ದರೆ ಯಾವ ಕೆಲಸಕ್ಕೂ ಅಡ್ತಡೆಗಳು ಮತ್ತು
ಕೊರತೆ ಕಂಡು ಬರುವುದಿಲ್ಲ. ಮಾಡಬೇಕು ಎನ್ನುವ ಮನಸ್ಸಿದ್ದರೆ ಎಲ್ಲ ತನ್ನಿಂದತಾನೆ
ನಡೆದು ಹೋಗುತ್ತೆ, ನಾನು ಮಾಡಬೇಕಾದ ಕರ್ತವ್ಯ ಯಾವುದು? ಮಾಡಿದ್ದೇನೋ, ಇಲ್ಲವೋ? ಎಂದು ಆತ್ಮಪೂರ್ವಕವಾಗಿ
ಯೋಚಿಸಿ. ಅದನ್ನು ಮಾಡಿ ಫಲವನ್ನು ಪರಮಾತ್ಮನಿಗೆ ಒಪ್ಪಿಸಿ.ಬಂದಿದ್ದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು, ಎಂದು ಮನಸ್ಸಿನ
ಸಿದ್ಧತೆ ಮಾಡಿಕೊಳ್ಳಿ.ಆಗ ಆಗುವುದೆಲ್ಲ ಒಳ್ಳೆಯದೇ ಆಗುತ್ತದೆ,
ಆಸೆ ಬೆಟ್ಟದಷ್ಟು, ಕನಸು ಆಕಾಶದಷ್ಟು, ಇರಬೇಕು. ಆದರೆ, ಇರುವುದರಲ್ಲಿ ತೃಪ್ತಿ
ಇರಬೇಕು.ಏಕೆಂದರೆ,ನಾವು ಬೆಟ್ಟದಷ್ಟು ದೊಡ್ಡವರಲ್ಲ,ಆಕಾಶದಷ್ಟು ವಿಶಾಲವಲ್ಲ,ಎಂಬ ಅರಿವು ಯಾವಾಗಲೂ ಇರಬೇಕು".
ಎಂದು ಅವರು ಹೇಳಿದಾಗ ನನ್ನ ಅನುಭವಕ್ಕೆ ಬಂದಂತೆ ಈ ಮಾತುಗಳು ನಿಜಕ್ಕೂ ಸತ್ಯ ವಾದದ್ದು.
ಮೇ ೧೬ ರಂದು ಮಸ್ಕತ ಅಲ್ ಫಲಜ್ ಹೋಟೆಲ್ ನ ದಿ ಗ್ರಾಂಡ್ ಸಭಾಂಗಣದಲ್ಲಿ ನಡೆಯಲಿರುವ "ರಾಗ ಅನುರಾಗ" ರಸಸಂಜೆ ಯಶಸ್ವಿ ಯಾಗಿ
ನಡೆಯಲಿ ಎಂದು ಆಶಿಸೋಣ. ಹಾಗು ಮಸ್ಕತ್ ನಲ್ಲಿ ವಾಸಿಸುತ್ತಿರುವ ಎಲ್ಲ ಕನ್ನಡಿಗರು
ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮ ಅಭೂತ ಪೂರ್ವ ಯಶಸ್ಸಿಗೆ ಕಾರಣೀ ಭೂತರಾಗೋಣ.
ಪಿ.ಎಸ್.ರಂಗನಾಥ.
ಮಸ್ಕತ್ - ಒಮಾನ್.
ಶುಕ್ರವಾರ, ಫೆಬ್ರವರಿ 8, 2013
Amazing Facts Great Reflexology Chart for Hand Points!
Wonders of Indian Civilization and Mind
Vedic Hindu marriage.-
Vedic Hindu marriage is viewed as sacramental, which is a lifelong commitment of one wife and one husband. It is the strongest bond between a man and a woman, which takes place in the presence of their parents, relatives, and friends. This is an irrevocable commitment for a lifetime.
For a Hindu, marriage is the only way to continue the family, and thereby repay, his debt to his ancestors. The most important thing is that all the Hindu God and Goddesses are also united in this. Marriage is for spiritual growth and a way of learning many things in life through experience. In other words, it is a perfect way of following the holy law of the Creator. There are eight ways of getting married. They are:
1. Brahma: Kanyadan performed by holy parents
2. Daiva: Kanyadan by God-fearing parents
3. Aarsha: Kanyadan by parents with 5 other gifts
4. Prajaapatya: Kanyadan by honor and respect
5. Asur: Love Marriage
6. Gandharv: Marrying for money
7. Raakshas: Forceful abduction of a maiden.
8. Paishaach: Intercourse in asleep or intoxicated situation thus taking full responsibility to protect her for forever.
Vedic Hindu marriage is viewed as sacramental, which is a lifelong commitment of one wife and one husband. It is the strongest bond between a man and a woman, which takes place in the presence of their parents, relatives, and friends. This is an irrevocable commitment for a lifetime.
For a Hindu, marriage is the only way to continue the family, and thereby repay, his debt to his ancestors. The most important thing is that all the Hindu God and Goddesses are also united in this. Marriage is for spiritual growth and a way of learning many things in life through experience. In other words, it is a perfect way of following the holy law of the Creator. There are eight ways of getting married. They are:
1. Brahma: Kanyadan performed by holy parents
2. Daiva: Kanyadan by God-fearing parents
3. Aarsha: Kanyadan by parents with 5 other gifts
4. Prajaapatya: Kanyadan by honor and respect
5. Asur: Love Marriage
6. Gandharv: Marrying for money
7. Raakshas: Forceful abduction of a maiden.
8. Paishaach: Intercourse in asleep or intoxicated situation thus taking full responsibility to protect her for forever.
ಗುರುವಾರ, ಫೆಬ್ರವರಿ 7, 2013
WHY TO VISIT TEMPLES ?
There are thousands of temples all over India in different size, shape and locations but not all of them are considered to be built the Vedic way. Generally, a temple should be located at a place where earth's magnetic wave path passes through densely. It can be in the outskirts of a town/village or city, or in middle of the dwelling place, or on a hilltop. The essence of visiting a temple is discussed here.
Now, these temples are located strategically at a place where the positive energy is abundantly available from the magnetic and electric wave distributions of north/south pole thrust. The main idol is placed in the core center of the temple, known as "*Garbhagriha*" or *Moolasthanam*. In fact, the temple structure is built after the idol has been placed. This *Moolasthanam* is where earth’s magnetic waves are found to be maximum. We know that there are some copper plates, inscribed with Vedic scripts, buried beneath the Main Idol. What are they really? No, they are not God’s / priests’ flash cards when they forget the *shlokas*. The copper plate absorbs earth’s magnetic waves and radiates it to the surroundings. Thus a person regularly visiting a temple and walking clockwise around the Main Idol receives the beamed magnetic waves and his body absorbs it. This is a very slow process and a regular visit will let him absorb more of this positive energy. Scientifically, it is the positive energy that we all require to have a healthy life.
Further, the Sanctum is closed on three sides. This increases the effect of all energies. The lamp that is lit radiates heat energy and also provides light inside the sanctum to the priests or *poojaris* performing the pooja. The ringing of the bells and the chanting of prayers takes a worshipper into trance, thus not letting his mind waver. When done in groups, this helps people forget personal problems for a while and relieve their stress. The fragrance from the flowers, the burning of camphor give out the chemical energy further aiding in a different good aura. The effect of all these energies is supplemented by the positive energy from the idol, the copper plates and utensils in the *Moolasthan*am / *Garbagraham*. *Theertham*, the “holy” water used during the pooja to wash the idol is not
plain water cleaning the dust off an idol. It is a concoction of Cardamom,*Karpura* (Benzoin), zaffron / saffron, *Tulsi* (Holy Basil), Clove, etc...Washing the idol is to charge the water with the magnetic radiations thus increasing its medicinal values. Three spoons of this holy water is distributed to devotees. Again, this water is mainly a source of magneto-therapy. Besides, the clove essence protects one from tooth decay, the saffron & *Tulsi* leafs protects one from common cold and cough, cardamom and *Pachha Karpuram* (benzoin), act as mouth fresheners. It is proved that *Theertham* is a very good blood purifier, as it is highly energized. Hence it is given as *prasadam* to the devotees. This way, one can claim to remain healthy by regularly visiting the Temples. This is why our elders used to suggest us to offer prayers at the temple so that you will be cured of many ailments. They were not always superstitious. Yes, in a few cases they did go overboard when due to ignorance they hoped many serious diseases could be cured at temples by deities. When people go to a temple for the *Deepaaraadhana*, and when the doors open up, the positive energy gushes out onto the persons who are there. The water that is sprinkled onto the assemblages passes on the energy to all. This also explains why men are not allowed to wear shirts at a few temples and women are requested to wear more ornaments during temple visits. It is through these jewels (metal) that positive energy is absorbed by the women. Also, it is a practice to leave newly purchased jewels at an idol’s feet and then wear them with the idol’s blessings. This act is now justified after reading this article. This act of “seeking divine blessings” before using any new article, like books or pens or automobiles may have stemmed from this through mere observation.
Energy lost in a day’s work is regained through a temple visit and one is refreshed slightly. The positive energy that is spread out in the entire temple and especially around where the main idol is placed, are simply absorbed by one's body and mind. Did you know, every Vaishnava(Vishnu devotees), “must” visit a Vishnu temple twice every day in their location. Our practices are NOT some hard and fast rules framed by 1 man and his followers or God’s words in somebody’s dreams. All the rituals, all the practices are, in reality, well researched, studied and scientifically backed thesis which form the ways of nature to lead a good healthy life.
The scientific and research part of the practices are well camouflaged as “elder’s instructions” or “granny’s teaching’s” which should be obeyed as a mark of respect so as to once again, avoid stress to the mediocre brains.
ಗುರುವಾರ, ಜನವರಿ 17, 2013
Cooking recipes
http://archana-hebbar.blogspot.com/
http://indiankannadarecipes.blogspot.com/
http://www.sugamakannada.com/cooking.html
http://hosaruchiadige.blogspot.com/
http://haleruchi.blogspot.com/
http://masterchefdivya.blogspot.com/
http://kannada.boldsky.com/recipes/
ಗುರುವಾರ, ಜನವರಿ 10, 2013
ರಾಗಿ ಮುದ್ದೆ, ಬಿಸಿ ಬಿಸಿ ರಾಗಿ ಮುದ್ದೆ
Items Required:
1cup Raggi flour
2 cups of water .
Preparation:
1. Boil the water in a pan.
2. add the raggi flour. let it rest for a while.
3. when bubbles appear on the sides , with a rolling pin, stir the flour in the water well.
4. this forms a dough.
5. let it cook for few minutes, and again mash the dough with the rolling pin to see no lumps are formed.
6. off the stove, while still warm, wet ur palms, and make balls froms this dough.
7. Relish hot.
8. This is a staple food of Bangalore localites.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)





































.jpg)




